ಪ್ಯಾರಿಸ್ (ಎಎಫ್‌ಪಿ): ಫ್ರಾನ್ಸ್ ಸಂಜಾತ ಪ್ರಸಿದ್ಧ ರಂಗಭೂಮಿ ನಿರ್ದೇಶಕ ಪೀಟರ್ ಬ್ರೂಕ್ (97) ಭಾನುವಾರ ನಿಧನರಾದರು.20ನೇ ಶತಮಾನದ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಬ್ರೂಕ್, 90ನೇ ವಯಸ್ಸಿನಲ್ಲಿಯೂ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.

1985ರಲ್ಲಿ ಅವರು ನಿರ್ದೇಶಿಸಿದ್ದ 9 ಗಂಟೆಗಳ ಹಿಂದೂ ಮಹಾಕಾವ್ಯ ‘ದಿ ಮಹಾಭಾರತ’ ಜನಪ್ರಿಯವಾಗಿತ್ತು. ಅವರು 1970ರಲ್ಲಿ ಪ್ಯಾರಿಸ್‌ನಲ್ಲಿ ನೆಲೆಸಿದ್ದ ವೇಳೆ ರಂಗಭೂಮಿ ಸಂಶೋಧನೆಗಾಗಿ ಅಂತರರಾಷ್ಟ್ರೀಯ ಕೇಂದ್ರ ಸ್ಥಾಪಿಸಿದ್ದರು.ರಂಗಭೂಮಿಯ ಅತ್ಯಂತ ಪ್ರಭಾವಶಾಲಿ ಪಠ್ಯಗಳಲ್ಲಿ ಒಂದಾದ ‘ದಿ ಎಂಪ್ಟಿ ಸ್ಪೇಸ್’ ಬರೆದರು.

1925ರ ಮಾರ್ಚ್ 21ರಂದು ಲಂಡನ್‌ನ ಯಹೂದಿ ವಿಜ್ಞಾನಿಗಳ ಕುಟುಂಬದಲ್ಲಿ ಜನಿಸಿದ ಬ್ರೂಕ್, ಲಂಡನ್ ವೆಸ್ಟ್ ಎಂಡ್‌ನಲ್ಲಿ ಉತ್ತಮ ನಿರ್ದೇಶಕ ಎಂಬ ಮೆಚ್ಚುಗೆಗಳಿಸಿದ್ದರು. 1970ರಲ್ಲಿ ಪ್ಯಾರೀಸ್‌ಗೆ ತೆರಳಿ, ಹಲವು ನಾಟಕಗಳನ್ನು ನಿರ್ದೇಶಿಸಿದ್ದರು. 1997ರಲ್ಲಿ ಲಂಡನ್‌ಗೆ ಮರಳಿದ್ದರು. ಇವರು ನಿರ್ದೇಶಿಸಿದ್ದ ಹಲವು ನಾಟಕಗಳಲ್ಲಿ ಪತ್ನಿ ನತಾಶಾ ಪ್ಯಾರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ನತಾಶಾ ಅವರು 2015ರಲ್ಲಿ ನಿಧನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.