ಬೆಂಗಳೂರು: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರು 'ಮಿಲಿ' ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಜಾಹ್ನವಿ ತಂದೆ ಬೋನಿ ಕಪೂರ್ ನಿರ್ಮಾಪಕರಾಗಿರುವ ಈ ಸಿನಿಮಾಗೆ ಮಲಯಾಳಂ ನಿರ್ದೇಶಕ ಮಧುಕುಟ್ಟಿ ಕ್ಸೇವಿಯರ್ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಮಿಲಿ ಹಿಂದಿ ಚಿತ್ರವು ಮಲಯಾಳಂನ ಅನ್ನಾ ಬೆನ್ ನಟನೆಯ 'ಹೆಲೆನ್' ಸಿನಿಮಾದ ರೀಮೇಕ್ ಆಗಿದೆ. ಸಾವಿನ ದವಡೆಯಿಂದ ಪಾರಾಗುವ ರೋಚಕ ಕಥಾಹಂದರವನ್ನು ಈ ಚಿತ್ರ ಹೊಂದಿದ್ದು, ವಿನೀತ್ ಶ್ರೀನಿವಾಸನ್ ನಿರ್ಮಿಸಿದ್ದರು. 2019ರಲ್ಲಿ ತೆರೆ ಕಂಡ ಈ ಸಿನಿಮಾ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿತು. ಅನ್ನಾ ಬೆನ್ ರಾಜ್ಯ ಪ್ರಶಸ್ತಿಗೆ ಪಾತ್ರರಾದರು.

ತಂದೆ ಬೋನಿ ಕಪೂರ್ ಚಿತ್ರದಲ್ಲಿ ಮೊದಲ ಬಾರಿಗೆ ಕೆಲಸ ಮಾಡಿದ ಅನುಭವವನ್ನು 24 ವರ್ಷದ ನಟಿ ಜಾಹ್ನವಿ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ಹಂಚಿಕೊಂಡಿದ್ದಾರೆ.

ಮತ್ತೊಂದು ಹಾಟ್ ಫೋಟೊ ವೈರಲ್: ಬಿಸಿಲಿಗೆ ನಶೆ ಏರಿಸಿದ ದಿಶಾ ಪಟಾನಿ !

'ಮಿಲಿ' ಚಿತ್ರದ ಅಭಿನಯ ಪೂರ್ಣಗೊಂಡಿದೆ. ಇದು ಅಪ್ಪನ ಜೊತೆಗಿನ ನನ್ನ ಮೊದಲ ಸಿನಿಮಾ. ಜೀವನದುದ್ದಕ್ಕೂ ತಂದೆಯೊಬ್ಬ ನಿರ್ಮಾಪಕ ಎಂಬುದನ್ನಷ್ಟೇ ಕೇಳಿಕೊಂಡು ಬಂದಿದೆ. ಆದರೆ ನಿನ್ನ ಜೊತೆ ಕೆಲಸ ಮಾಡಿದ ಬಳಿಕ, ನನಗೆ ಕೂಲ್ ಎನಿಸಿತು. 'ಆಯ್ಕೆ ಮಾಡುವ ಪ್ರತಿ ಸಿನಿಮಾದ ಹೃದಯ ಮತ್ತು ಆತ್ಮ ನೀನಾಗಬೇಕು' ಎಂದು ಪ್ರತಿಯೊಬ್ಬರು ಹೇಳುವುದರ ಅರ್ಥವೇನು ಎಂಬುದು ನನಗೆ ಅಂತಿಮವಾಗಿ ತಿಳಿಯಿತು' ಎಂದು ಜಾಹ್ನವಿ ಬರೆದಿದ್ದಾರೆ.

'ಮಿಲಿ' ವಿಶೇಷವೆನಿಸಲು ತಂದೆಯ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ ಎಂಬುದು ಮಾತ್ರವಲ್ಲ. ಇಡೀ ಚಿತ್ರತಂಡದಿಂದ ಪಡೆದ ಅನುಭವಕ್ಕೂ ಜಾಹ್ನವಿ ಧನ್ಯವಾದ ಸಲ್ಲಿಸಿದ್ದಾರೆ. ನಿರ್ದೇಶಕರಿಗೆ ಮತ್ತು ಸಹ-ನಟ, ಚಿತ್ರ ಸಾಹಿತಿ ನೋಬಲ್ ಬಾಬು ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

ಎಲೆಯಡಿಕೆ ತಿನ್ನುತ್ತಿದ್ದೆ: 'ಗುಟ್ಕಾ ಮ್ಯಾನ್' ಅಪಖ್ಯಾತಿಗೆ ಒಳಗಾದವನ ಅಳಲು!

ಚಿತ್ರದಲ್ಲಿ ತಂದೆಗೆ ಹೆಮ್ಮೆ ತರುವಂತೆ ನಟಿಸಿದ್ದೇನೆ ಎಂಬ ನಂಬಿಕೆ ತಮಗಿದೆ ಎಂದು ಜಾಹ್ನವಿ ಹೇಳಿದ್ದಾರೆ.

'ಮಿಲಿ' ಚಿತ್ರದಲ್ಲಿ ನಟ ಮನೋಜ್ ಪಹವಾ ಮತ್ತು ಸನ್ನಿ ಕೌಶಾಲ್ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.