ಕಾರು ಅಪಘಾತದಲ್ಲಿ ಕ್ರಿಕೆಟಿಗ ರಿಷಭ್ ಪಂತ್ ಗಾಯಗೊಂಡ ಬೆನ್ನಲ್ಲೇ ನಟಿ ಊರ್ವಶಿ ರೌಟೇಲಾ ಮಾಡಿರುವ ಟ್ವೀಟ್ ಹೆಚ್ಚಿನ ಗಮನ ಸೆಳೆದಿದೆ.

ನಿಮ್ಮ ಮತ್ತು ನಿಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಪಂತ್ ಅವರ ಹೆಸರನ್ನು ಉಲ್ಲೇಖ ಮಾಡದೆಯೇ ಊರ್ವಶಿ ಟ್ವೀಟ್ ಮಾಡಿದ್ದರು.

ಊರ್ವಶಿ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಈವರೆಗೆ 9,000 ಹೆಚ್ಚು ಮಂದಿ ರಿಟ್ವೀಟ್ ಮಾಡಿದ್ದು, 3,000 ಹೆಚ್ಚು ಕಮೆಂಟ್‌ಗಳು ಬಂದಿವೆ.

ದ್ವೇಷದ ನಡುವೆಯೂ ಪಂತ್ ಆರೋಗ್ಯದ ಬಗ್ಗೆ ಊರ್ವಶಿ ಕಾಳಜಿ ತೋರಿದ್ದಾರೆ ಎಂದು ಕೆಲವು ಬಳಕೆದಾರರು ಬೆಂಬಲ ಸೂಚಿಸಿದ್ದಾರೆ.

ಆದರೆ ಪಂತ್ ಹೆಸರನ್ನು ಉಲ್ಲೇಖ ಮಾಡದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಇನ್ನು ಕೆಲವು ಬಳಕೆದಾರರು ದೂರಿದ್ದಾರೆ.

ಈ ಹಿಂದೆ ಪಂತ್ ಹಾಗೂ ಊರ್ವಶಿ ನಡುವಣ ಡೇಟಿಂಗ್‌ಗೆ ಸಂಬಂಧಿಸಿದಂತೆ ವರದಿಗಳು ಹರಿದಾಡಿತ್ತು. ಬಳಿಕ ವೈಮನಸ್ಸು ಉಂಟಾಗಿ ಪರಸ್ಪರ ಪರೋಕ್ಷವಾಗಿ ಆರೋಪ ಪ್ರತ್ಯಾರೋಪ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.