ಚೆನ್ನೈ: ದಕ್ಷಿಣ ಭಾರತದ ಹೆಸರಾಂತ ನಟ ರಜನಿಕಾಂತ್ ಅವರ ಪುತ್ರಿ ಹಾಗೂ ಚಿತ್ರ ನಿರ್ದೇಶಕಿ ಐಶ್ವರ್ಯಾ ಅವರ ಮನೆಯಲ್ಲಿ ಬೆಲೆಬಾಳುವ ಚಿನ್ನಾಭರಣಗಳ ಕಳ್ಳತನವಾಗಿದ್ದು, ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆಬ್ರುವರಿ 27 ರಂದು ಐಶ್ವರ್ಯಾ ಅವರು ಸಲ್ಲಿಸಿದ ದೂರಿನಲ್ಲಿ, ‘ನನ್ನ ಲಾಕರ್‌ನಲ್ಲಿದ್ದ ಹಲವಾರು ಬೆಲೆಬಾಳುವ ಆಭರಣಗಳನ್ನು ಕಳವು ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ. ಈ ಘಟನೆ ಫೆಬ್ರವರಿ 10 ರಂದು ಬೆಳಕಿಗೆ ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಮನೆಯ ಮೂವರು ಸಿಬ್ಬಂದಿ, ಓರ್ವ ಚಾಲಕ ಮತ್ತು ಇಬ್ಬರು ಕೆಲಸದವರು ಕಳ್ಳತನ ಮಾಡಿರುವ ಶಂಕೆ ಇದೆ ಎಂದು ಐಶ್ವರ್ಯಾ ಹೇಳಿದ್ದಾರೆ.

2019 ರಲ್ಲಿ ನಡೆದ ತನ್ನ ತಂಗಿಯ ಮದುವೆಯಲ್ಲಿ ಆಭರಣಗಳನ್ನು ಬಳಸಿದ ನಂತರ ತನ್ನ ಲಾಕರ್‌ನಲ್ಲಿ ಇರಿಸಿದ್ದೇನೆ. ಮದುವೆಯ ನಂತರ ಲಾಕರ್ ಅನ್ನು ಮೂರು ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಗಸ್ಟ್ 2021 ರವರೆಗೆ, ಅದು ತಮ್ಮ ಸೇಂಟ್ ಮೇರಿಸ್ ರೋಡ್ ಅಪಾರ್ಟ್‌ಮೆಂಟ್‌ನಲ್ಲಿತ್ತು. ನಂತರ ಅದನ್ನು ಸಿಐಟಿ ಕಾಲೋನಿಯಲ್ಲಿರುವ ತಮ್ಮ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಸೆಪ್ಟೆಂಬರ್ 2021 ರಲ್ಲಿ ಲಾಕರ್ ಅನ್ನು ಮತ್ತೆ ಸೇಂಟ್ ಮೇರಿಸ್ ರೋಡ್ ಅಪಾರ್ಟ್ಮೆಂಟ್‌ಗೆ ಸ್ಥಳಾಂತರಿಸಲಾಯಿತು. ಏಪ್ರಿಲ್ 9, 2022 ರಂದು ಅದನ್ನು ನಟ ರಜನಿಕಾಂತ್ ಅವರ ಪೋಯಸ್ ಗಾರ್ಡನ್ ನಿವಾಸಕ್ಕೆ ಕೊಂಡೊಯ್ಯಲಾಯಿತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಲಾಕರ್ ಕೀಗಳನ್ನು ಸೇಂಟ್ ಮೇರಿಸ್ ರೋಡ್ ಅಪಾರ್ಟ್‌ಮೆಂಟ್‌ನಲ್ಲಿರುವ ತನ್ನ ವೈಯಕ್ತಿಕ ಕಪಾಟಿನಲ್ಲಿ ಇರಿಸಲಾಗಿತ್ತು ಹಾಗೂ ಈ ವಿಷಯ ತಮ್ಮ ಸಿಬ್ಬಂದಿಗೆ ತಿಳಿದಿದೆ ಎಂದು ಐಶ್ವರ್ಯಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.