ಮಂಸೋರೆ ನಿರ್ದೇಶನದ ‘ಆ್ಯಕ್ಟ್ 1978’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ತಂಡವು ಈಗ ಗ್ರಾಫಿಕ್ಸ್ ಕೆಲಸಗಳು ಹಾಗೂ ಹಿನ್ನೆಲೆ ಸಂಗೀತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಶ್ರುತಿ ಹರಿಹರನ್ ಮತ್ತು ಸಂಚಾರಿ ವಿಜಯ್ ಅಭಿನಯದ ಮಹಿಳಾ ಪ್ರಧಾನವಾದ ‘ನಾತಿಚರಾಮಿ’ ಸಿನಿಮಾ ನಿರ್ದೇಶಿಸಿದ್ದ ಮಂಸೋರೆ ಅವರು ಈಗ ಈ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಇದು ಮಹಿಳಾ ಕೇಂದ್ರಿತ’ ಎನ್ನುತ್ತಾರೆ ಅವರು. ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಸಂಚಾರಿ ವಿಜಯ್, ಬಿ. ಸುರೇಶ ಅವರೂ ತಾರಾಗಣದಲ್ಲಿ ಇದ್ದಾರೆ. ‘ತುಂಬು ಗರ್ಭಿಣಿಯೊಬ್ಬಳು ವ್ಯವಸ್ಥೆಯ ವಿರುದ್ಧ ನಡೆಸುವ ಹೋರಾಟ ಈ ಚಿತ್ರದ ಕಥೆ. ಶೀರ್ಷಿಕೆಯಲ್ಲಿ ಸೂಚ್ಯವಾಗಿ ಹೇಳಿರುವ ಕಾಯ್ದೆಗೂ ಇಂದಿನ ಸಂದರ್ಭದಲ್ಲಿ ಕಾಣುತ್ತಿರುವ ಭ್ರಷ್ಟಾಚಾರಕ್ಕೂ ಪರೋಕ್ಷ ಸಂಬಂಧವೊಂದು ಇದೆ. ಆ ಸಂಬಂಧ ಏನು ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು’ ಎನ್ನುತ್ತಾರೆ ಮಂಸೋರೆ.

‘ವ್ಯವಸ್ಥೆಯಲ್ಲಿನ ಭ್ರಷ್ಟಾಚಾರವು ಚಿತ್ರದ ಒಂದು ಭಾಗ. ಅದಕ್ಕೆ ಸಂಬಂಧಿಸಿದ ಹಲವು ಆಯಾಮಗಳು ಚಿತ್ರದಲ್ಲಿವೆ’ ಎಂದರು. ಈ ಚಿತ್ರವನ್ನು ಮೇ ತಿಂಗಳಲ್ಲಿ ತೆರೆಗೆ ತರಬೇಕು ಎಂಬ ಉದ್ದೇಶ ಸಿನಿತಂಡಕ್ಕೆ ಇದೆ. ಇದರ ಹೆಚ್ಚಿನ ಭಾಗಗಳ ಚಿತ್ರೀಕರಣವು ಮೈಸೂರಿನಲ್ಲಿ ಆಗಿದೆ.

ಜಯಂತ ಕಾಯ್ಕಿಣಿ ಅವರು ಬರೆದ ಒಂದು ಹಾಡಿನ ಚಿತ್ರೀಕರಣಕ್ಕಾಗಿ ಸಿನಿತಂಡವು ರಾಜ್ಯದಾದ್ಯಂತ ಸುತ್ತಾಟ ನಡೆಸಿದೆ.

‘ಭ್ರಷ್ಟರಿಗೆ ಶಿಕ್ಷೆ ಆಗುತ್ತಿಲ್ಲ ಎಂಬ ಅಂಶವನ್ನು ಎತ್ತಿಕೊಂಡು ಸಿನಿಮಾ ಮಾಡಲಾಗಿದೆ. ಅವರಿಗೆ ಶಿಕ್ಷೆ ಆಗುವಂತೆ ಸರ್ಕಾರದ ಮೇಲೆ ಒತ್ತಡ ತರುವುದು ಕಥೆಯ ಒಂದು ಎಳೆ. ಪ್ರಮೋದ್ ಶೆಟ್ಟಿ ಅವರು ಇದರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿಭಾಯಿಸಿದ್ದಾರೆ’ ಎನ್ನುತ್ತವೆ ಸಿನಿಮಾ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.