ನಟ ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್ರಾಜ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಜುಲೈ 29ರಿಂದ ವೂಟ್ ಸೆಲೆಕ್ಟ್ನಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಕಳೆದ ಜೂನ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ದೇಶದಾದ್ಯಂತ 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ 25 ದಿನ ಪೂರೈಸಿತ್ತು. ಈ ಪೈಕಿ ಇನ್ನೂ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, 50ನೇ ದಿನದತ್ತ ಚಿತ್ರ ಹೆಜ್ಜೆ ಇಟ್ಟಿದೆ. ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ₹150 ಕೋಟಿ ಮೀರಿದ್ದು, ಈ ಪೈಕಿ ನಿರ್ಮಾಪಕರು ₹90–100 ಕೋಟಿ ಲಾಭ ಪಡೆದಿದ್ದಾರೆ.

ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ ‘ಧರ್ಮ’ನ ಪಾತ್ರದಲ್ಲಿ ರಕ್ಷಿತ್ ನಟಿಸಿದ್ದರು. ಧರ್ಮ–ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಕಿರಣ್ರಾಜ್ ಖ್ಯಾತಿ ಪಡೆದಿದ್ದರು. ಚಿತ್ರದ 25 ದಿನ ಪೂರೈಸಿದ ಸಂದರ್ಭದಲ್ಲಿ ದೇಶಿ ತಳಿ ನಾಯಿಗಳ ದತ್ತು, ರಕ್ಷಣೆ, ಪೋಷಣೆಗೆ ಚಿತ್ರದ ಲಾಭಾಂಶದ ಶೇ 5ರಷ್ಟು ಹಣವನ್ನು ನೀಡುವುದಾಗಿ ರಕ್ಷಿತ್ ಘೋಷಿಸಿದ್ದರು. ಜೊತೆಗೆ ಸಿನಿಮಾ ತಂಡದ 200 ಜನರಿಗೆ ಶೇ 10ರಷ್ಟು ಲಾಭಾಂಶ ಹಂಚುವುದಾಗಿ ರಕ್ಷಿತ್ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.