ಅತಿಯಾದ ಪ್ರೀತಿಯೂ ಮುಳುವಾದೀತೇ? ಹೀಗೊಂದು ಕಥೆ ಹೇಳುತ್ತಾ ಬರುತ್ತಿದೆ ‘ಬಾ ನಲ್ಲೆ ಮದುವೆಗೆ’. ಚಿತ್ರ ತಂಡ ಹೇಳುವ ಪ್ರಕಾರ ಅತಿಯಾಗಿ ಪ್ರೀತಿಸುವುದೂ ಒಳ್ಳೆಯದಲ್ಲವಂತೆ!. ಅದಕ್ಕಾಗಿಯೇ ‘ಹುಡುಗಿ ನೋಡಿ ಹುಚ್ಚರಾಗಬೇಡಿ’ ಎಂದು ಚಿತ್ರದ ಶೀರ್ಷಿಕೆಗೆ ಅಡಿಬರಹ ಇಡಲಾಗಿದೆ.

ಎಂ.ಯೋಗೇಶ್ ನಂದನ್ ಸಿನಿಮಾಕ್ಕೆ ರಚನೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಜತೆಗೆ ಭುಜಂಗೇಶ್ವರ ಉರುಕಾತೇಶ್ವರಿ ಮೂವೀಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಹೊಸಬರ ಚಿತ್ರತಂಡವಿದು. ಇತ್ತೀಚೆಗೆ ಲವ್ಲಿ ಸ್ಟಾರ್ ಪ್ರೇಮ್ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದರು.

ಹಳ್ಳಿ ಹುಡುಗನಾಗಿ ಅರ್ಜುನ್ ನಾಯಕ. ಮುಗ್ದ ಹುಡುಗಿಯಾಗಿ ಶೋಭಾ ನಾಯಕಿ. ಇವರೊಂದಿಗೆ ಮೀಸೆ ಆಂಜನಪ್ಪ, ನಾಗೇಶ್‌ಮಯ್ಯಾ, ಮೈಸೂರು ಮಂಜುಳಾ ಜೊತೆಗೆ ಹಲವು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿವೆ. ಐದು ಹಾಡುಗಳಿಗೆ ದಿನೇಶ್‌ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪ್ರಸನ್ನಕುಮಾರ್, ಸಂಕಲನ ರಘು, ಸಾಹಸ ಕೌರವ ವೆಂಕಟೇಶ್, ನೃತ್ಯ ರಾಜ್‌ದೇವು ಅವರದ್ದು. ಚಾಮರಾಜನಗರದ ಸುಂದರ ತಾಣಗಳು ಮತ್ತು ಸುವರ್ಣವತಿ ಡ್ಯಾಮ್ ಕಡೆಗಳಲ್ಲಿ 38 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.