ಸಿಂಪಲ್ ಸುನಿ ನಿರ್ದೇಶಿಸಿ ವಿನಯ್ ರಾಜ್ಕುಮಾರ್ ಮುಖ್ಯಭೂಮಿಕೆಯಲ್ಲಿರುವ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಇತ್ತೀಚೆಗಷ್ಟೆ ಮುಕ್ತಾಯಗೊಂಡಿದೆ. ಈ ಚಿತ್ರದಲ್ಲಿ ವಿನಯ್ ತಂದೆ ರಾಘವೇಂದ್ರ ರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‘ಶೀರ್ಷಿಕೆಯಂತೆ ಇದೊಂದು ಸರಳವಾದ ಪ್ರೇಮಕಥೆ. ಸಿನಿಮಾದ ನಾಯಕ ಸಂಗೀತ ನಿರ್ದೇಶಕನಾಗಿರುವ ಕಾರಣ ಸಂಗೀತಮಯ ಪಯಣ ಇದಾಗಿರಲಿದೆ. ಒಟ್ಟು 11 ಹಾಡುಗಳಿದ್ದು, ಮೈಸೂರಿನಲ್ಲಿ ನಮ್ಮ ಆಲ್ಬಂ ಪ್ಲೇ ಮಾಡಿಕೊಂಡು ಕಾರಿನಲ್ಲಿ ಹೊರಟರೆ ಹಾಡುಗಳು ಮುಗಿಯುವ ಹೊತ್ತಿಗೆ ಬೆಂಗಳೂರು ತಲುಪಿರುತ್ತೀರಿ. ಮುಂಬೈ, ರಾಜಸ್ಥಾನ, ಬೆಂಗಳೂರು, ಮೈಸೂರಿನಲ್ಲಿ 83 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು ನಿರ್ದೇಶಕ ಸುನಿ.

ಮೈಸೂರು ರಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಟಿ ಸ್ವಾತಿಷ್ಠ ಕೃಷ್ಣನ್, ‘ರಾಧಾಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಚಿತ್ರದಲ್ಲಿ ವಿನಯ್ಗೆ ಜೋಡಿಯಾಗಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ.ವೀರ್ ಸಮರ್ಥ್ ಸಂಗೀತ, ಕಾರ್ತಿಕ್ ಕ್ಯಾಮೆರಾ, ಆದಿ ಸಂಕಲನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.