ಡಿಸೆಂಬರ್ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ನಿಖಿಲ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ರೈಡರ್’ ಡಿ.24ಕ್ಕೆ ಬಿಡುಗಡೆಯಾಗಲಿದೆ. ಸೋಮವಾರ ಚಿತ್ರತಂಡವು ಬಿಡುಗಡೆ ದಿನಾಂಕ ಘೋಷಿಸಿದೆ.

ನಿಖಿಲ್ ಕುಮಾರ್, ಕಶ್ಮೀರ ಪರದೇಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾವನ್ನು ಲಹರಿ ಪ್ರೊಡಕ್ಷನ್ಸ್ ಹಾಗೂ ಶಿವನಂದಿ ಎಂಟ್ರೈನ್ಮೆಂಟ್ಸ್ ನಿರ್ಮಾಣ ಮಾಡಿದೆ. ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಕಥಾಹಂದರವನ್ನು ಚಿತ್ರವು ಹೊಂದಿದ್ದು, ತೆಲುಗಿನ ವಿಜಯ್ ಕುಮಾರ್ ಕೊಂಡ ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ತೆಲುಗಿನ ‘ಒಕ್ಕಾ ಲೈಲಾ ಕೋಸಂ’ ಮತ್ತು ‘ಗುಂಡೆ ಜಾರಿ ಗಲ್ಲನ್ಥೈಯಿಂದೆ’ ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ವಿಜಯ್ ಅವರದ್ದು.ಚಿತ್ರದಲ್ಲಿ ನಿಖಿಲ್ ಅವರದ್ದು ಬ್ಯಾಸ್ಕೆಟ್ಬಾಲ್ ಆಟಗಾರನ ಪಾತ್ರ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.