ಲೂಸ್ ಮಾದ ಯೋಗೇಶ್ ಅಭಿನಯದ ‘ಲಂಕೆ’ ಚಿತ್ರದ ಹಾಡುಗಳನ್ನು ನಟ ಡಾಲಿ ಧನಂಜಯ ಬಿಡುಗಡೆ ಮಾಡಿದರು.

‘ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ ಆ್ಯಂಡ್ ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಹಾಡುಗಳನ್ನು ನೋಡಿದೆ. ತುಂಬಾ ಚೆನ್ನಾಗಿದೆ. ಚಿತ್ರ ಕೂಡ ಅಷ್ಟೇ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ ಎಂದ ಧನಂಜಯ, ಸರ್ಕಾರ ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ಶೇ 100ರಷ್ವು ಆಸನ ಭರ್ತಿಗೆ ಅವಕಾಶ ನೀಡಲಿ. ಕೊರೋನ ಕಡಿಮೆಯಾಗಿ ಚಿತ್ರಮಂದಿರ ತುಂಬಿ ತುಳುಕುವ ದಿನಗಳು ಬೇಗ ಬರಲಿ’ ಎಂದು ಆಶಿಸಿದರು.

ನಾಯಕ ಯೋಗಿ ಮಾತನಾಡಿ, ‘ನಾನು ಇಷ್ಟುಚೆನ್ನಾಗಿ ನೃತ್ಯ ಮಾಡಲು ನೃತ್ಯ ನಿರ್ದೇಶಕ ಧನು ಅವರೇ ಕಾರಣ. ಕಾರ್ತಿಕ್ ಶರ್ಮರ ಸಂಗೀತ ಅದ್ಭುತವಾಗಿದೆ. ನನ್ನ ಜೊತೆ ಅಭಿನಯಿಸಿರುವ ನಾಯಕಿಯರ ಅಭಿನಯವು ತುಂಬಾ ಚೆನ್ನಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ’ ಎಂದರು.

ನಾಯಕಿ ಕೃಷಿ ತಾಪಂಡ ಮಾತನಾಡಿ, ‘ನನಗೆ ನೃತ್ಯ ಗೊತ್ತಿಲ್ಲ. ನಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಲು ಸಹಕಾರ ನೀಡಿದ ನೃತ್ಯ ನಿರ್ದೇಶಕ ಧನು ಹಾಗೂ ನಾಯಕ ಯೋಗಿ ಅವರಿಗೆ ಧನ್ಯವಾದ’ ಎಂದರು.

‘ನನ್ನದು ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಹಾಗೂ ಒಂದು ಗ್ಲಾಮರಸ್ ಹಾಡಿಗೂ ಯೋಗಿ ಅವರೊಂದಿಗೆ ಹೆಜ್ಜೆ ಹಾಕಿದ್ದೇನೆ. ಚಿತ್ರ ಆರಂಭವಾದಗಿನಿಂದಲೂ ನಿರ್ದೇಶಕರು ನೀಡಿರುವ ಪ್ರೋತ್ಸಾಹಕ್ಕೆ ಆಭಾರಿ’ ಎನ್ನುತ್ತಾರೆ ನಟಿ ಕಾವ್ಯಾ ಶೆಟ್ಟಿ.

ಗಾಯತ್ರಿ ಜಯರಾಂ, ಎಸ್ಟರ್ ನರೋನ, ಸಾಹಿತಿ ಗೌಸ್ ಫಿರ್ ಹಾಗೂ ವಿತರಕ ಮಾರ್ಸ್ ಸುರೇಶ್ ಇದ್ದರು.

ಚಿತ್ರಕ್ಕೆ ರಾಮಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ ಪ್ರಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ.

ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖಾ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.