ದಿಗಂತ್ - ಐಂದ್ರಿತಾ ರೇ ಜೋಡಿ ನಾಯಕ - ನಾಯಕಿಯಾಗಿ ನಟಿಸಿರುವ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಲಿರಿಕಲ್ ಸಾಂಗ್ ಬಿಡುಗಡೆಗೊಳಿಸಿದರು.

‘ನಾನು ಮೂಲತಃ ಮಲೆನಾಡಿನವನು. ಅಡಿಕೆ ಬೆಳೆದು ನನಗೆ ಅಭ್ಯಾಸವಿದೆ.. ಈ ಸಿನಿಮಾ ಮಲೆನಾಡಿನ ಹುಡುಗನ ಕಥೆಯನ್ನೇ ಆಧರಿಸಿರುವುದರಿಂದ ನನಗೆ ನಟಿಸಲು ಸುಲಭವಾಯಿತು’ ಎಂದರು ದಿಗಂತ್.

‘ಜನ ಈಗ ಉತ್ತಮ ಕಥಾವಸ್ತುವುಳ್ಳ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ನಮ್ಮ ಚಿತ್ರವನ್ನು ಕನ್ನಡ ಕಲಾರಸಿಕರು ಇಷ್ಟಪಟ್ಟು ಯಶಸ್ಸು ಗಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು ಚಿತ್ರದ ಮತ್ತೊಬ್ಬ ನಾಯಕಿ ರಂಜನಿ ರಾಘವನ್.

ಕೊರೊನಾ ಹಾವಳಿ ಕಡಿಮೆಯಾದರೆ ಸೆಪ್ಟೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ದೇಶಕ ವಿನಾಯಕ ಕೋಡ್ಸರ ಹೇಳಿದರು. ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನ ಇದೆ. ವಿಶ್ವಜಿತ್ ರಾವ್ ಹಾಡು ಬರೆದಿದ್ದಾರೆ. ಸಿಲ್ಕ್ ಮಂಜು ಚಿತ್ರದ ನಿರ್ಮಾಪಕರು. ಲಹರಿ ಸಂಸ್ಥೆ ಆಡಿಯೊ ಹಕ್ಕು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.