ಬೆಂಗಳೂರು: ಇಸ್ರೇಲ್ ಪಡೆಯು ಪ್ಯಾಲೆಸ್ಟೀನ್ನ ರಫಾ ಶಿಬಿರದ ಮೇಲೆ ದಾಳಿ ಮಾಡಿ ಹತ್ತಾರು ಮಂದಿಯನ್ನು ಕೊಂದ ಬಳಿಕ ಭಾನುವಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ 'All Eyes On Rafah' ಎಂಬ ಕ್ಯಾಂಪೇನ್ ನಡೆಯುತ್ತಿದೆ.

ಪ್ಯಾಲೆಸ್ಟೀನ್ ಅನ್ನು ಬೆಂಬಲಿಸಿ ನಡೆಯುತ್ತಿರುವ ಈ ಕ್ಯಾಂಪೇನ್ ಪರವಾಗಿ ಪ್ರಿಯಾಂಕಾ ಚೋಪ್ರಾ, ಮಾಧುರಿ ದೀಕ್ಷಿತ್ ಸೇರಿದಂತೆ ಬಾಲಿವುಡ್ನ ಹಲವು ತಾರೆಯರು ಇನ್ಸ್ಟಾಗ್ರಾಮ್ ರೀಲ್ ಪೋಸ್ಟ್ ಮಾಡಿದ್ದರು. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವರ್ಗದಿಂದ ಕೇಳಿಬಂದ ಟೀಕೆ ಬಳಿಕ ಮಾಧುರಿ ದೀಕ್ಷಿತ್ ತಮ್ಮ ರೀಲ್ ಅನ್ನು ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿದೆ.

ಗುಲಾಬಿ ಬಣ್ಣದ ಲೆಹಂಗಾ ಉಡುಪಿನಲ್ಲಿದ್ದ ಚಿತ್ರದ ಜೊತೆ ಮಾಧುರಿ, ‘All Eyes On Rafah'ಎಂಬ ಬರಹವಿರುವ ರಫಾ ಚಿತ್ರವನ್ನು ಪೋಸ್ಟ್ ಮಾಡಿದ್ದರು.

ಪೋಸ್ಟ್ ಡಿಲೀಟ್ ಆದ ಬಳಿಕವೂ ನೆಟ್ಟಿಗರು ಕುಹಕವಾಡಿದ್ದಾರೆ. ‘ಯಾರೊ ಕೆಲವರು ಏನೋ ಯೋಚಿಸುತ್ತಿದ್ದಾರೆ ಎಂಬ ಭಯದಿಂದ ಪೋಸ್ಟ್ ಮಾಡುವುದು ಮತ್ತು ಡಿಲೀಟ್ ಮಾಡುವುದು ಮತ್ತಷ್ಟು ಕರುಣಾಜನಕ’ ಎಂದು ಒಬ್ಬರು ಬರೆದಿದ್ದಾರೆ. ‘ಮಾಧುರಿ ದೀಕ್ಷಿತ್ ಸಹ ತಮ್ಮ ಅಪಪ್ರಚಾರ ಪೋಸ್ಟ್ ಡಿಲೀಟ್ ಮಾಡಿದ್ದಾರೆ’ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಮೇಡಂ ಯಾರೋ ಟೀಕಿಸಿದರು ಎಂದು ನಿಮ್ಮ ಪೋಸ್ಟ್ ಡಿಲೀಟ್ ಮಾಡಿದಿರೇ? ಎಂದು ಇನ್ನೊಬ್ಬರು ಸ್ಕ್ರೀನ್ಶಾಟ್ ಸಮೇತ ಟ್ವೀಟ್ ಮಾಡಿದ್ದಾರೆ.

'All Eyes On Rafah' ಎಂದರೇನು?

ಇತ್ತೀಚೆಗೆ ಪ್ಯಾಲೆಸ್ಟೀನ್ನ ಗಾಜಾದ ರಫಾ ಶಿಬಿರದ ಮೇಲೆ ದಾಳಿ ಮಾಡಿದ್ದ ಇಸ್ರೇಲ್ ಪಡೆಗಳು ಮಕ್ಕಳು ಸೇರಿದಂತೆ 40 ಮಂದಿಯನ್ನು ಕೊಂದು ಹಾಕಿತ್ತು. ಈ ಕುರಿತಂತೆ, ಹಲವು ದೇಶಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರಿದ ವಿರೋಧ ವ್ಯಕ್ತವಾಗಿತ್ತು. ಮೃತದೇಹಗಳು ಮತ್ತು ಗಾಯಾಳುಗಳ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 'All Eyes on Rafah' ಎಂದು ಬರೆದಿರುವ ಒಂದು ಚಿತ್ರ ಮಾತ್ರ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಿದೆ.

ಇಸ್ರೇಲ್ ದಾಳಿ ಬಳಿಕ ಲಕ್ಷಾಂತರ ಜನ ನಿರಾಶ್ರಿತರಾಗಿದ್ದು, ಯಾವುದೇ ಮಾನವೀಯ ನೆರವು ಸಿಗದೆ ಶಿಬಿರಗಳಲ್ಲಿ ಜೀವಿಸುತ್ತಿರುವ ಜನರ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದೂ ಈ ಚಿತ್ರದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.