ತಿರುವನಂತಪುರ: ಮಲಯಾಳ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಕುರಿತು ನಟ ಮಮ್ಮುಟ್ಟಿ ಮೌನ ಮುರಿದಿದ್ದಾರೆ.

‘ಚಿತ್ರರಂಗದಲ್ಲಿ ಯಾವುದೇ ಶಕ್ತಿ ಕೇಂದ್ರವಿಲ್ಲ’ ಎಂದು ಹೇಳುವ ಮೂಲಕ 72 ವರ್ಷದ ಮಮ್ಮುಟ್ಟಿ ಅವರು ಹೇಮಾ ಸಮಿತಿ ವರದಿಯಲ್ಲಿ ಸೂಚಿಸಲಾದ ಶಿಫಾರಸುಗಳನ್ನು ಸ್ವಾಗತಿಸಿದ್ದಾರೆ. ಇದೀಗ ಮಮ್ಮುಟ್ಟಿ ಹೇಳಿಕೆ ಮಲಯಾಳ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಚಿತ್ರೋದ್ಯಮದ ಬಗ್ಗೆ ಅಧ್ಯಯನ ಮಾಡಲು, ವರದಿಯನ್ನು ಸಿದ್ಧಪಡಿಸಲು ಹಾಗೂ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಲು ಸರ್ಕಾರ ನ್ಯಾಯಮೂರ್ತಿ ಹೇಮಾ ಸಮಿತಿಯನ್ನು ರಚಿಸಿತ್ತು. ಅದರಂತೆ ಹೇಮಾ ಸಮಿತಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಪರಿಹಾರ ಕ್ರಮಗಳನ್ನು ಎಲ್ಲರೂ ಸರ್ವಾನುಮತದಿಂದ ಸ್ವಾಗತಿಸಬೇಕು. ಜತೆಗೆ, ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಚಲನಚಿತ್ರೋದ್ಯಮದ ಎಲ್ಲಾ ಸಂಘಗಳು ಒಟ್ಟಾಗಿ ನಿಲ್ಲುವ ಸಮಯ ಬಂದಿದೆ’ ಎಂದು ಮಮ್ಮುಟ್ಟಿ ‘ಫೇಸ್ಬುಕ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇಂತಹ ಬೆಳವಣಿಗೆಗಳು ನಡೆದಾಗ ಕಲಾವಿದರ ಸಂಘದ ನಾಯಕತ್ವ ವಹಿಸಿಕೊಂಡಿರುವವರು ಮೊದಲು ಪ್ರತಿಕ್ರಿಯಿಸುತ್ತಾರೆ ಎಂಬ ಕಾರಣಕ್ಕೆ ಮೌನ ವಹಿಸಿದ್ದೆ ಎಂದು ಮಮ್ಮುಟ್ಟಿ ಹೇಳಿದ್ದಾರೆ.

ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬೆನ್ನಲ್ಲೇ ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್ಲಾಲ್, ಇತರ ಪದಾಧಿಕಾರಿಗಳು ಈಚೆಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು.

ನಟರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅನೇಕ ಕಲಾವಿದೆಯರು ಕಳೆದ ಕೆಲವು ದಿನಗಳಿಂದ ಆರೋಪ ಮಾಡಿದ್ದಾರೆ. ಕೆಲವು ಬಂಗಾಳಿ ನಟಿಯರೂ ಆರೋಪಕ್ಕೆ ದನಿಗೂಡಿಸಿದ್ದಾರೆ.

ಹೇಮಾ ಸಮಿತಿ ವರದಿ ಬಳಿಕ ಸಿಪಿಎಂ ಶಾಸಕ ಎಂ.ಮುಕೇಶ್, ನಟ ಸಿದ್ದೀಕ್, ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯ ಅರೋಪಗಳು ಕೇಳಿಬಂದಿದ್ದು, ನಾಲ್ಕು ಎಫ್ಐಆರ್ ದಾಖಲಾಗಿವೆ.
.ನಟರಿಂದ ಲೈಂಗಿಕ ಕಿರುಕುಳ: ಮಲಯಾಳ ಚಿತ್ರೋದ್ಯಮದಲ್ಲಿ ಮತ್ತೆ ಅಲ್ಲೋಲ–ಕಲ್ಲೋಲ.ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ: ತನಿಖೆಗೆ ಮಲಯಾಳ ಚಲನಚಿತ್ರ ಕಲಾವಿದರ ಸಂಘ ಆಗ್ರಹ.ಲೈಂಗಿಕ ಕಿರುಕುಳ: ಮಲಯಾಳ ಚಿತ್ರರಂಗದ ಕರಾಳ ಮುಖ ಬಹಿರಂಗಪಡಿಸಿದ ವರದಿ.ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ನಟ ಮೋಹನ್ ಲಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ.ನ್ಯಾ. ಹೇಮಾ ವರದಿ: ‘ಅಮ್ಮ’ ಅಧ್ಯಕ್ಷ ಮೋಹನ್ ಲಾಲ್ ಸೇರಿ ಎಲ್ಲಾ ಸದಸ್ಯರ ರಾಜೀನಾಮೆ.ಕೇರಳ | ನಿರ್ದೇಶಕ ರಂಜಿತ್ ವಿರುದ್ಧ 2ನೇ ಪ್ರಕರಣ ದಾಖಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.