ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿನ ನಟನೆ ಬಳಿಕ ಸ್ಯಾಂಡಲ್ವುಡ್ನ ‘ಟಗರು ಪುಟ್ಟಿ’ಯಾದ ನಟಿ ಮಾನ್ವಿತ ಕಾಮತ್, ಕೊಂಚ ಗ್ಯಾಪ್ ಬಳಿಕ ಮತ್ತೆ ತೆರೆ ಮೇಲೆ ಸಕ್ರಿಯರಾಗುತ್ತಿದ್ದಾರೆ. ಹೇಮಂತ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ರಿಚ್ಚಿ’ ಚಿತ್ರದಲ್ಲಿ ನಟಿ ಮಾನ್ವಿತ ಕಾಮತ್ ನಟಿಸುತ್ತಿದ್ದಾರೆ.

ಗಾಯಕ ಸೋನು ನಿಗಮ್ ಹಾಡಿರುವ, ಅಗಸ್ತ್ಯ ಅವರು ಸಂಗೀತ ಸಂಯೋಜಿಸಿರುವ ‘ಸನಿಹ ನೀ ಇರುವಾಗ’ ಎಂಬ ಹಾಡಿಗೆ ಮಾನ್ವಿತ ಹೆಜ್ಜೆ ಹಾಕಲಿದ್ದಾರೆ. ಜೊತೆಗೆ ಸಿನಿಮಾದ ಕೆಲ ಸನ್ನಿವೇಶಗಳಲ್ಲೂ ಅವರು ಅಭಿನಯಿಸಲಿದ್ದಾರೆ ಎಂದು ಹೇಮಂತ್ ತಿಳಿಸಿದ್ದಾರೆ.

ಅಗಸ್ತ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ವೆಂಕಟಾಚಲಯ್ಯ ಅವರು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರಾಕೇಶ್ ರಾವ್ ಅವರ ಸಹ ನಿರ್ಮಾಣವಿದೆ. ‘ರಿಚ್ಚಿ’ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಒಂದು ಹಾಡು ಹಾಗೂ ಕೆಲವು ಮಾತಿನ ಭಾಗದ ಚಿತ್ರೀಕರಣ ಬಾಕಿಯಿದೆ ಎಂದಿದೆ ಚಿತ್ರತಂಡ. ಅಜಿತ್ ಕುಮಾರ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.