ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ನಟನೆಯ ‘ಟಗರು’ ಸಿನಿಮಾದಲ್ಲಿನ ನಟನೆ ಬಳಿಕ ಸ್ಯಾಂಡಲ್ವುಡ್ನ ‘ಟಗರು ಪುಟ್ಟಿ’ಯಾದ ನಟಿ ಮಾನ್ವಿತ ಕಾಮತ್, ಕೊಂಚ ಗ್ಯಾಪ್ ಬಳಿಕ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ.

ಕೆ.ಆರ್.ಎಸ್ ಪ್ರೊಡಕ್ಷನ್ಸ್ನ ಚೊಚ್ಚಲ ಚಿತ್ರಕ್ಕೆ ಪ್ರವೇಶಿಸಿರುವ ಮಾನ್ವಿತ ‘ಲವ್ ಲಿ’ ಸ್ಟಾರ್ ಪ್ರೇಮ್ಗೆ ಜೋಡಿಯಾಗಿದ್ದಾರೆ. ಅಥರ್ವ ಆರ್ಯ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ತಂದೆ ಮಗನ ಭಾವನಾತ್ಮಕ ಕಥಾಹಂದರ ಒಳಗೊಂಡಿರುವ ವಿಷಯಾಧಾರಿತ(ಕಂಟೆಂಟ್) ಚಿತ್ರದಲ್ಲಿ ಪ್ರೇಮ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲಿ ಮಾನ್ವಿತಾ ಭಾಗಿಯಾಗಿದ್ದು, ಇದೇ ಮೊದಲ ಬಾರಿಗೆ ಈ ಇಬ್ಬರ ಕಾಂಬಿನೇಷನ್ ತೆರೆ ಮೇಲೆ ಬರುತ್ತಿದೆ.

ಸದ್ಯದಲ್ಲೇ ಸಿನಿಮಾದ ಶೀರ್ಷಿಕೆಯನ್ನು ಚಿತ್ರತಂಡ ಘೋಷಿಸಲಿದೆ. ‘ಜೂಟಾಟ’, ‘ಗುಬ್ಬಚ್ಚಿ’ ಸಿನಿಮಾ ನಿರ್ದೇಶಿಸಿರುವ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರವಿದು. ‘ತಂದೆಯ ಮಹತ್ವ ಸಾರುವ ಸಿನಿಮಾ ಇದಾಗಿದ್ದು, ಕುಟುಂಬ ಅಥವಾ ಸಮಾಜದಲ್ಲಿ ಆತ ಕಡೆಗಣನೆಗೆ ಒಳಗಾದಾಗ ಯಾವ ರೀತಿ ನೋವು ಅನುಭವಿಸುತ್ತಾನೆ ಎನ್ನುವುದು ಚಿತ್ರದ ಒನ್ ಲೈನ್ ಕಥೆ’ ಎಂದಿದ್ದಾರೆ ಅಥರ್ವ. ಚಿತ್ರದಲ್ಲಿ ತಬಲ ನಾಣಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

ಚಿತ್ರಕ್ಕೆ ನಾಗಾರ್ಜುನ ಆರ್.ಡಿ ಛಾಯಾಗ್ರಹಣ, ಆಕಾಶ್ ಪರ್ವ ಸಂಗೀತ ನಿರ್ದೇಶನ, ವೇದಿಕ್ ವೀರ ಸಂಕಲನವಿದೆ. ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ವಿಜಯ್ ಚೆಂಡೂರ್, ಅರುಣ ಬಾಲರಾಜ್ ಒಳಗೊಂಡ ತಾರಾಬಳಗವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.