ಬೆಂಗಳೂರು: ‘ಸರ್ಜಾ ಫ್ಯಾನ್ಸ್ ಕ್ಲಬ್‌ನವರು ಎನ್ನಲಾದ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಕೆಲವು ಕರೆಗಳನ್ನು ನಾನು ಸ್ವೀಕರಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಕೆಟ್ಟದಾಗಿ ಕಾಮೆಂಟ್‌ಗಳು ಬರುತ್ತಿವೆ’ ಎಂದು ನಟಿ ಶ್ರುತಿ ಹರಿಹರನ್ ಹೇಳಿದರು.

ಮಲ್ಲೇಶ್ವರದ ರೇಣುಕಾಂಬಾ ಸ್ಟುಡಿಯೊದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜುನ್ ಸರ್ಜಾ ಹೆಸರು ಹೇಳದೇ ತಮಗಾದ ಕಿರುಕುಳವನ್ನು ವಿವರಿಸಿದರು.

‘ತಬ್ಬಿಕೊಂಡ ಘಟನೆ ನಂತರ, ನಾನು ನೋ ಎಂದಿದ್ದೆ. ಅವರ ಅಸಭ್ಯ ವರ್ತನೆ ನನಗಿಷ್ಟವಿಲ್ಲವೆಂಬುದು ಅವರಿಗೂ ಗೊತ್ತಾಗಿತ್ತು. ಅಷ್ಟಾದರೂ ‘ಬರಬಹುದಲ್ವಾ ಡಿನ್ನರ್‌ಗೆ’ ಎಂದು ಕೇಳಿದರು. ‘ನೋ‘ ಎಂದ ಮೇಲೂ ಆ ರೀತಿ ಮಾಡಬಹುದಾ?’ ಎಂದು ಅವರು ಪ್ರಶ್ನಿಸಿದರು.

‘ಚಿತ್ರೀಕರಣದ ವೇಳೆಯಲ್ಲಿ ನನಗಾದ ಅನ್ಯಾಯವನ್ನು, ನನ್ನ ಶಕ್ತಿ ಎಷ್ಟಿದೆಯೋ ಅಷ್ಟು ಖಂಡಿಸಿದ್ದೆ. ನಿರ್ದೇಶಕರ ಬಳಿ ಹೇಳಿಕೊಂಡಿದ್ದೆ. ರಿಹರ್ಸಲ್‌ಗೆ ಬರುವುದಿಲ್ಲ. ನೇರವಾಗಿ ಟೇಕ್‌ಗೆ ಬರುತ್ತೇನೆ ಎಂದಿದ್ದೆ. ಆ ವಿಷಯವನ್ನು ಹೊರಗಡೆ ಹೇಳುವ ಧೈರ್ಯ ನನಗಿರಲಿಲ್ಲ. ಹೆದರಿಕೆ ಸಾಕಷ್ಟಿತ್ತು. ಈಗ ಮೀ–ಟೂ ಅಭಿಯಾನ ಪ್ರಾರಂಭವಾದ ಬಳಿಕ ಧೈರ್ಯ ಬಂದಿದೆ’ ಎಂದು ಶ್ರುತಿ ಹೇಳಿದರು.

‘ಮುಖಾಮುಖಿ ಮಾತನಾಡಲಿ’ ಎಂದು ಸರ್ಜಾ ಮಾವ ರಾಜೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರುತಿ, ‘ಅವರು, ಹಿರಿಯ ನಟರು. ಅವರು ಬಂದರೆ ಮುಖಾಮುಖಿ ಮಾತನಾಡುತ್ತೇನೆ. ಅದು, ರಾಜಿಗಲ್ಲ’ ಎಂದರು.

‘ನನ್ನ ಅನ್ಯಾಯಕ್ಕೆ ತಾರ್ಕಿಕ ಅಂತ್ಯ ಬೇಕು.ಸಾರ್ವಜನಿಕವಾಗಿ ಕ್ಷಮೆ ಕೇಳಿದರೆ, ನನಗೆ ನ್ಯಾಯ ಆಗಬಹುದು. ಯಾವುದೇ ಹೆಣ್ಣಿಗೂ ಪುರುಷನೊಬ್ಬ ಮುಟ್ಟಿದಾಗ, ಅದನ್ನು ಪ್ರತಿಭಟಿಸಿ ದೂರು ನೀಡುವ ಧೈರ್ಯ ಹೆಣ್ಣಿಗೆ ಬರಬೇಕು’ ಎಂದರು.

ಧ್ರುವ ವಿರುದ್ಧ ಕಿಡಿ: ‘ನನ್ನ ಮಾವ, ಶ್ರುತಿಗಿಂತ ಚೆನ್ನಾಗಿರುವ ನಟಿಯರೊಂದಿಗೆ ನಟಿಸಿದ್ದಾರೆ. ಶ್ರುತಿ ಹಿಂದೆ ಯಾರಾದರೂ ಗಂಡಸರು ಇದ್ದರೆ ಮುಂದೆ ಬರಲಿ. ಕೈ ಕೈ ಮಿಲಾಯಿಸುತ್ತೇನೆ’ ಎನ್ನುವ ಮೂಲಕ ನಟ ಧ್ರುವ ಸರ್ಜಾ ಅಹಂಕಾರದ ಮಾತುಗಳನ್ನಾಡಿದ್ದಾರೆ’ ಎಂದು ಶ್ರುತಿ ಗೆಳೆಯ ಅನಿಲ್ ಶೆಟ್ಟಿ ಕಿಡಿಕಾರಿದರು.

ಇದನ್ನೂ ಓದಿ:ಶ್ರುತಿ #MeToo ಆರೋಪಕ್ಕೆ ‘ವಿಸ್ಮಯ’ ನಿರ್ದೇಶಕ ಅರುಣ್ ವೈದ್ಯನಾಥನ್ ಹೇಳಿದ್ದೇನು?

‘ಒಪ್ಪಂದವಿದ್ದರೆ ಮಾತ್ರ ಕಿಸ್ಸಿಂಗ್ ದೃಶ್ಯ’

ಸಿನಿಮಾದಲ್ಲಿ ಅಭಿನಯಿಸುವ ಮುನ್ನ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಕಿಸ್ಸಿಂಗ್ ಹಾಗೂ ಅಪ್ಪುಗೆ ದೃಶ್ಯಗಳ ಬಗ್ಗೆ ನಟಿಗೆ ಹೇಳಿಯೇ ಚಿತ್ರೀಕರಣ ಆರಂಭಿಸಲಾಗುತ್ತದೆ. ಚಿತ್ರೀಕರಣದ ಹೊರಗೆ ಆ ರೀತಿ ಮಾಡಿದರೆ ಅದು ಅಸಭ್ಯ ವರ್ತನೆ ಆಗುತ್ತದೆ.ಅದನ್ನು ನಾವೆಲ್ಲರೂ ಖಂಡಿಸುತ್ತೇವೆ’ ಎಂದು ನಿರ್ದೇಶಕಿ ರೂಪಾ ಅಯ್ಯರ್ ಹೇಳಿದರು.

ಅನ್ಯಾಯವಾದರೆ ದೂರು ಕೊಡಿ

ಲೈಂಗಿಕ ಕಿರುಕುಳ ಎಂಬುದು ಚಿತ್ರರಂಗದಲ್ಲಿ ಕಾಯಿಲೆಯೇ ಆಗಿದೆ. ಅದರಿಂದ ನೊಂದ ಸಿನಿಮಾ ರಂಗದ ಯಾವುದೇ ಮಹಿಳೆ, ನಮ್ಮ ಸಂಘಟನೆಗೆ ದೂರು ನೀಡಬಹುದು. ನಾವು ಕಾನೂನು ಹೋರಾಟಕ್ಕೆ ಸಹಕಾರ ನೀಡುತ್ತೇವೆ’ ಎಂದು ‘ಫೈರ್’ ಸಂಘಟನೆ ಕಾರ್ಯದರ್ಶಿ ಚೇತನ್ ಹೇಳಿದರು.

ದೂರವಾಣಿ ಸಂಖ್ಯೆ: 08023462028

ವನ್ನೂ ಓದಿ:

ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!

ಸ್ಯಾಂಡಲ್ವುಡ್ #MeToo: ಶ್ರುತಿ ಹರಿಹರನ್ಗೆ ಹಲವೆಡೆಯಿಂದ ಬೆಂಬಲ

ಅರ್ಜುನ್ಕ್ಷಮೆ ಕೇಳುವುದು ದೊಡ್ಡತನ,ನಾನು ಶ್ರುತಿ ಹರಿಹರನ್ ಪರ:ಪ್ರಕಾಶ್ ರೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.