‘ಮಿಷನ್ ಮಂಗಲ್’ ಸಿನಿಮಾದಲ್ಲಿ ಐವರು ನಟಿಯರಿದ್ದೇವೆ. ಚಿತ್ರ ಬಿಡುಗಡೆಗೊಂಡಿದ್ದರೂ ಕಂಗನಾ ರನೋಟ್ ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಯಾರನ್ನೂ ಪ್ರಶಂಸೆ ಮಾಡಿಲ್ಲ’ ಎಂದು ನಟಿ ತಾಪ್ಸಿ ಪನ್ನು ಟ್ವೀಟ್ ಮಾಡುವ ಮೂಲಕ ನಟಿ ಕಂಗನಾ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಕಂಗನಾ ಅಭಿನಯದ ಸಿನಿಮಾವೊಂದರ ಟ್ರೇಲರ್ ಬಿಡುಗಡೆಗೊಂಡ ಸಂದರ್ಭದಲ್ಲಿ ಚಿತ್ರತಂಡವನ್ನು ಹೊಗಳಿತಾಪ್ಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕಂಗನಾ ಅವರ ಸಹೋದರಿ ರಂಗೋಲಿ ಚಂಡೇಲ್ ಪ್ರತಿಕ್ರಿಯಿಸಿ ‘ಸಿನಿಮಾ ತಂಡವನ್ನು ಹೊಗಳಲು ಸಾಕಷ್ಟು ಪ್ರಯತ್ನ ಮಾಡಿದ್ದೀರಿ, ಆದರೆ ಕಂಗನಾ ಬಗ್ಗೆ ಒಂದು ಸಾಲು ಬರೆಯಲೂ ನಿಮ್ಮಿಂದ ಆಗಿಲ್ಲ. ಆಕೆಯನ್ನು ಅನುಕರಿಸಿಯೇ ನೀವು ಬಾಲಿವುಡ್ನಲ್ಲಿ ಉಳಿದುಕೊಂಡಿದ್ದು ನೆನಪಿರಲಿ’ ಎಂದು ಟ್ವೀಟಿಸಿದ್ದರು.

ಇದಕ್ಕೆ ಕಂಗನಾ ಕೂಡ ‘ಮಹಿಳೆಯರಿಗೆ ನಟಿಯರೇ ಬೆಂಬಲ ನೀಡಬೇಕು’ ಎಂದಿದ್ದರು. ಈ ವೇಳೆ ಅನುರಾಗ್ ಕಶ್ಯಪ್ ಅವರು ತಾಪ್ಸಿ ಬೆಂಬಲಕ್ಕೆ ಬಂದಿದ್ದರು. ‘ಸಿನಿಮಾವನ್ನು ಹೊಗಳಿದರೆ ಅದರಲ್ಲಿ ಕಂಗನಾ ಕೂಡ ಸೇರುತ್ತಾರೆ. ಎಲ್ಲರ ಶ್ರಮವನ್ನು ಅವರು ಶ್ಲಾಘಿಸಿದ್ದಾರೆ’ ಎಂದು ಹೇಳಿದ್ದರು.

ಈಗ ತಾಪ್ಸಿ ಪನ್ನು, ಕಂಗನಾಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಮಹಿಳೆಯರಿಗೆ ಬೆಂಬಲ ನೀಡಬೇಕು ಎಂದು ಯಾವಾಗಲೂ ಹೇಳುತ್ತೀರಿ, ಆದರೆ ನಮ್ಮ ಸಿನಿಮಾ ಬಗ್ಗೆ ನೀವು ಮಾತಾಡಿದ್ದನ್ನು ಎಲ್ಲಿಯೂ ಕೇಳಿಲ್ಲ. ನಾನು ನಿಮ್ಮ ಜೂನಿಯರ್ ಇರಬಹುದು. ನಾನು ಮಾಡಿರುವ ಕೆಲವು ಸಿನಿಮಾಗಳನ್ನು ಕೆಲವರಾದರೂ ಮೆಚ್ಚಿಕೊಂಡಿದ್ದಾರೆ’ ಎಂದು ಟಾಂಟ್ ನೀಡಿದ್ದಾರೆ.

ಕಂಗನಾ ಹಾಗೂ ಅವರ ಸಹೋದರಿಯ ಟ್ವೀಟ್ ಬಳಿಕ ತಾಪ್ಸಿ ಬೇಸರಗೊಂಡಿದ್ದರು. ಸಂದರ್ಶನವೊಂದರಲ್ಲೂ ನೋವು ತೋಡಿಕೊಂಡಿದ್ದರು. ‘ನಾನು ಇಷ್ಟಪಡುವ ನಟಿ ಈ ರೀತಿ ಹೇಳಿದಾಗ ಆಘಾತ ಆಗಿತ್ತು. ಸಿನಿಮಾ ಬಗ್ಗೆ ನಾನು ಒಳ್ಳೆಯದೇ ಮಾತನಾಡಿದ್ದೆ. ಕಂಗನಾಳನ್ನು ಪ್ರತ್ಯೇಕವಾಗಿ ಅಭಿನಂದಿಸಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾತನಾಡಿದ್ದಾರೆ. ನನ್ನನ್ನು ಸಸ್ತಾ (ದುಬಾರಿಯಲ್ಲದ) ನಟಿ ಎಂದು ಹೇಳಿದ್ದಾರೆ. ಇದು ಸರಿಯಲ್ಲ’ ಎಂದು ಹೇಳಿದ್ದರು.

‘ಅವರನ್ನು ನಾನು ಅನುಕರಿಸಿದ್ದೇ ಆದರೆ, ಅದರಲ್ಲಿ ತಪ್ಪೇನಿದೆ. ಅವರು ಒಳ್ಳೆಯ ನಟಿ ಅನ್ನುವುದು ನಿಜ’ ಎಂದು ತಾಪ್ಸಿ ಹೇಳಿದ್ದರು.

ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ದತ್ತಣ್ಣ, ನಿತ್ಯಾ ಮೆನನ್ ನಟನೆಯ ‘ಮಿಷನ್ ಮಂಗಲ್’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಿ ಸಾಕಷ್ಟು ಗಣ್ಯರಿಂದ ಪ್ರಶಂಸೆ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.