‘ನೀನು ಸುಂದರವಾಗಿದ್ದಿ ಎಂಬ ಮಾತು ನನ್ನಲ್ಲಿ ಆತ್ಮವಿಶ್ವಾಸವನ್ನು ತುಂಬಿತ್ತು’ ಹೀಗೆ ಹೇಳಿದ್ದು ಮಾಡೆಲ್ ವರ್ಷಿತಾ ಥತವರ್ಷಿ ಎಂಬ ಮಾಡೆಲ್.

ಮಾಡೆಲ್ ಅಂದ ಮೇಲೆ ಕಣ್ಣ ಮುಂದೆ ಬರುವ ರೂಪ ತೆಳ್ಳಗೆ, ಬೆಳ್ಳಗೆ ಬಳುಕುವ ದೇಹ. ಆದರೆ ವರ್ಷಿತಾ ಹಾಗಲ್ಲ. ಗುಂಡುಗುಂಡಾಗಿ, ಕಪ್ಪು ಚರ್ಮದ ಹುಡುಗಿ. ವಯಸ್ಸು 25, ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಹುಟ್ಟಿದ ಈ ಹುಡುಗಿ ಬೆಳೆದಿದ್ದು ದೆಹಲಿಯಲ್ಲಿ. ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಷನ್ನಲ್ಲಿ ಪದವಿ. ಮಾಡೆಲಿಂಗ್ ಆಸಕ್ತಿಯ ಕ್ಷೇತ್ರವಾಗಿದ್ದರೂ ಸಿನಿಮಾದಲ್ಲಿ ನಟಿಸಬೇಕೆಂಬ ಅದಮ್ಯ ಆಸೆ ಇತ್ತು. ಆದರೆ ಅವಕಾಶ ಕೇಳಿ ಸಿನಿಮಾದವರ ಬಾಗಿಲು ತಟ್ಟಿದಾಗ ಅಲ್ಲಿಂದ ಸಿಕ್ಕಿದ ಉತ್ತರ, ಬೆಳ್ಳಗಾಗಿ ಬನ್ನಿ, ತೆಳ್ಳಗಾಗಿ ಬನ್ನಿ ಎಂಬುದಾಗಿತ್ತು. ತಮ್ಮ ಮಾಡೆಲಿಂಗ್ ಪಯಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವರ್ಷಿತಾ ಹೇಳಿದ್ದು ಹೀಗೆ;

ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಸಬ್ಯಸಾಚಿ ಜ್ಯುವೆಲರಿಯ ಪ್ರದರ್ಶನವೊಂದಕ್ಕೆ ಹೋಗಿದ್ದೆ. ಅಲ್ಲಿ ಸಬ್ಯಸಾಚಿ ಮುಖರ್ಜಿ ಅವರನ್ನು ಭೇಟಿಯಾದೆ. ನೀನು ತುಂಬಾ ಸುಂದರವಾಗಿದ್ದೀ ಎಂದು ಅವರು ಹೇಳಿದರು. ಸಬ್ಯ ಸರ್ಗೆ ನಾನು ಸುಂದರ ವಾಗಿ ಕಂಡಿದ್ದೇನೆ ಎಂದರೆ ನಾನು ಸುಂದರಿಯಾಗಿಯೇ ಇದ್ದೇನೆ ಎಂದು ಮನಸ್ಸು ಹೇಳಿತು.

ಅಲ್ಲಿಂದ ನಾನು ಕಿವಿಯೋಲೆ ಖರೀದಿ ಮಾಡಿ ಸಬ್ಯ ಸರ್ ಜತೆ ಫೋಟೊವೊಂದನ್ನು ಕ್ಲಿಕ್ಕಿಸಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದೆ. ಇದಾಗಿ ಎರಡು ತಿಂಗಳ ನಂತರ ಕೋಲ್ಕತ್ತದಲ್ಲಿ ಶೂಟಿಂಗ್ ಇದೆ ಬರಬೇಕು ಎಂದು ಸಬ್ಯ ಸರ್ ಕಡೆಯಿಂದ ಫೋನ್ ಬಂತು. ನಾನು ಹೋದೆ. ಅಲ್ಲಿ ಮದುಮಗಳ ಡ್ರೆಸ್ನಲ್ಲಿ ಶೂಟಿಂಗ್ ಆಯ್ತು. 2019ರ ಮಹಿಳಾ ದಿನಾಚರಣೆ ವೇಳೆ ಅದನ್ನು ಸಬ್ಯಸರ್ ಪೋಸ್ಟ್ ಮಾಡಿದ್ದರು. ಆ ಚಿತ್ರ ವೈರಲ್ ಆಗಿತ್ತು.

ನನ್ನನ್ನು ಪ್ಲಸ್ ಸೈಜ್ ಮಾಡೆಲ್, ಡಾರ್ಕ್ ಮಾಡೆಲ್ ಎಂದು ಜನ ಹೇಳುತ್ತಾರೆ. ಮಾಡೆಲ್ ಗಳು ಅಂದರೆ ಹೀಗೇ ಇರಬೇಕು ಎಂಬ ಧೋರಣೆ ಇರುವ ನಮ್ಮ ಸಮಾಜದಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಅದಕ್ಕೆ ಧೈರ್ಯ ಮತ್ತು ತಾಳ್ಮೆ ಬೇಕು. ನನ್ನ ಚಿತ್ರ ವೈರಲ್ ಆದ ನಂತರ ಹಲವಾರು ಮಹಿಳೆಯರು ಅವರಲ್ಲಿ ಸ್ಫೂರ್ತಿ ತುಂಬಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಸೌಂದರ್ಯ ಅಂದರೆ ನೀವು ಹೀಗಿದ್ದೀರಿ ಎಂಬುದಲ್ಲ, ನೀವು ಏನು ಎಂಬುದನ್ನು ತೋರಿಸಿಕೊಡುವುದರಲ್ಲಿದೆ. ನಿಜ, ವರ್ಷಿತಾ ಎಂಬ ಈ ಮಾಡೆಲ್ ಅದನ್ನುಸಾಬೀತುಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.