ನವದೆಹಲಿ:2018ನೇ ಸಾಲಿನ66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಲಾಗಿದ್ದು, ಪ್ರಾದೇಶಿಕ ವಿಭಾಗದಲ್ಲಿ ಮಂಸೋರೆ ನಿರ್ದೇಶನದ ಕನ್ನಡದ ‘ನಾತಿಚರಾಮಿ’ ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ‘ಮಾಯಾವಿ ಮನವೆ’ ಗಾಯನಕ್ಕೆ ಬಿಂದುಮಾಲಿನಿ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕನ್ನಡಕ್ಕೆ ಒಟ್ಟು 11 ಪ್ರಶಸ್ತಿಗಳು ದೊರೆತಿರುವುದು ವಿಶೇಷ.

ಇದನ್ನೂ ಓದಿ:ಚಿತ್ರ ವಿಮರ್ಶೆ | ‘ನಾತಿಚರಾಮಿ’ಮೈ ಮನದ ನಡುವಣ ಸಂಘರ್ಷ

‘ನಾತಿಚರಾಮಿ’ ವಿವಿಧ ವಿಭಾಗದಲ್ಲಿ ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇದೇ ಸಿನಿಮಾದ ‘ಮಾಯಾವಿ ಮನವೆ’ ಹಾಡಿನ ರಚನೆಗೆ ಮಂಸೋರೆ ಪ್ರಶಸ್ತಿ ಪಡೆದಿದ್ದಾರೆ. ಸಂಕಲನ ವಿಭಾಗದಲ್ಲಿಯೂ ಪ್ರಶಸ್ತಿ ಲಭಿಸಿದೆ. ಜೊತೆಗೆ, ಈ ಚಿತ್ರದ ನಾಯಕಿ ಶ್ರುತಿ ಹರಿಹರನ್ ಅವರು ಜ್ಯೂರಿ ಕಮಿಟಿಯ ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ ಪಡೆದಿದ್ದಾರೆ.

ಡಿ. ಸತ್ಯಪ್ರಕಾಶ್ ನಿರ್ದೇಶನದ ‘ಒಂದಲ್ಲಾ ಎರಡಲ್ಲಾ’ ಚಿತ್ರಕ್ಕೆ ರಾಷ್ಟ್ರೀಯ ಏಕತೆಗೆ ನೀಡುವ ‘ನರ್ಗಿಸ್ ದತ್ ಪ್ರಶಸ್ತಿ’ ಲಭಿಸಿದೆ. ಇದೇ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಮಾಸ್ಟರ್ ಪಿ.ವಿ. ರೋಹಿತ್ ‘ಶ್ರೇಷ್ಠ ಬಾಲನಟ’ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.

ಕನ್ನಡ ಚಿತ್ರರಂಗದಲ್ಲಿಯೇ ಹೊಸ ದಾಖಲೆ ಬರೆದ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಈ ಚಿತ್ರದಲ್ಲಿನ ಅತ್ಯುತ್ತಮ ಸಾಹಸ ನಿರ್ದೇಶನಕ್ಕಾಗಿ ವಿಕ್ರಮ್ ಮೋರ್ ಮತ್ತು ಅನ್ಬು ಅರಿವ್ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ, ಬೆಸ್ಟ್ ಸ್ಪೆಷಲ್ ಎಫೆಕ್ಟ್ಗಾಗಿ ತೆಲುಗಿನಅವೆ (Awe)ಚಿತ್ರದೊಂದಿಗೆ ಪ್ರಶಸ್ತಿ ಹಂಚಿಕೊಂಡಿದೆ.

ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು –ಕೊಡುಗೆ ರಾಮಣ್ಣ ರೈ’ ತನ್ನದಾಗಿಸಿಕೊಂಡಿದೆ. ‘ಮೂಕಜ್ಜಿ ಕನಸುಗಳು’ ಸಿನಿಮಾರಾಷ್ಟ್ರೀಯ ಆರ್ಕೈವ್ಸ್ ಗೌರವಕ್ಕೆ ಪಾತ್ರವಾಗಿದೆ.

ಪ್ರಶಸ್ತಿಗಳು ಹಾಗೂಸಿನಿಮಾಗಳು

1. ರಾಷ್ಟ್ರೀಯ ಏಕತೆ : ಒಂದಲ್ಲಾಎರಡಲ್ಲಾ

2. ಅತ್ಯುತ್ತಮ ಬಾಲ ಕಲಾವಿದ: ಮಾಸ್ಟರ್ ರೋಹಿತ್ (ಒಂದಲ್ಲಾಎರಡಲ್ಲಾ)

3. ಅತ್ಯುತ್ತಮ ಮಕ್ಕಳ ಚಿತ್ರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

4. ಅತ್ಯುತ್ತಮ ಪ್ರಾದೇಶಿಕ ಚಿತ್ರ : ನಾತಿಚರಾಮಿ

5. ಅತ್ಯುತ್ತಮ ಗಾಯಕಿ : ಬಿಂದು ಮಾಲಿನಿ (ನಾತಿಚರಾಮಿ)

6. ಅತ್ಯುತ್ತಮ ಸಾಹಿತ್ಯ : ಮಂಸೋರೆ (ನಾತಿಚರಾಮಿ)

7. ಅತ್ಯುತ್ತಮ ಸಂಕಲನ : ನಾತಿಚರಾಮಿ

8.ವಿಶೇಷ ಉಲ್ಲೇಖಾರ್ಹ ಪ್ರಶಸ್ತಿ :ಶ್ರುತಿ ಹರಿಹರನ್ (ನಾತಿಚರಾಮಿ)

9. ಅತ್ಯುತ್ತಮ ವಿಎಫ್ಎಕ್ಸ್ : ಕೆಜಿಎಫ್

10. ಅತ್ಯುತ್ತಮ ಸಾಹಸ ನಿರ್ದೇಶನ : ಕೆಜಿಎಫ್

11. ರಾಷ್ಟ್ರೀಯ ಸಾಧಕರು/ರಾಷ್ಟ್ರೀಯ ಆರ್ಕೈವ್ಸ್ ಗೌರವ : ಮೂಕಜ್ಜಿ

12. ಅತ್ಯುತ್ತಮ ಶೈಕ್ಷಣಿಕ ಚಿತ್ರ :‘ಸರಳ ವಿರಳ’ (ನಿರ್ದೇಶನ –ಈರೇಗೌಡ, ಕನ್ನಡ)

ಭಾರತೀಯ ಭಾಷೆಗಳಲ್ಲಿ ಅತೀ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ

ಮಲೆನಾಡು, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದು ಹತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದ ದಿನ ಮತ್ತು ಒಂದು ಸಿನಿಮಾ ರಾಷ್ಟ್ರೀಯ ಆರ್ಕೈವ್(National archives)ಗೆ ಆಯ್ಕೆ ಗೊಂಡಿದೆ. ಈ ದಿನ ಒಟ್ಟಾರೆ ಹನ್ನೊಂದು ರಾಷ್ಟ್ರೀಯ ಪ್ರಶಸ್ತಿ/ ಮನ್ನಣೆ ಗಳಿಸಿದ ಕ್ಷಣ ಮತ್ತು ಈ ಸಾಲಿನಲ್ಲಿ ಭಾರತೀಯ ಭಾಷೆಗಳಲ್ಲಿ ಅತೀ ಹೆಚ್ಚು ಕನ್ನಡಕ್ಕೆ ಸಂದಿತು ಎಂದು ಪ್ರಶಸ್ತಿ ಆಯ್ಕೆಯ ಸಮಿಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದ ಬಿ.ಎಸ್. ಲಿಂಗದೇವರು ಹೇಳಿದ್ದಾರೆ.

ಪ್ರಶಸ್ತಿ ಪ್ರವಾಹ; ಮಳೆ ಪ್ರವಾಹ: ಎರಡನ್ನೂ ಸರಿದೂಗಿಸಬೇಕು

ಕನ್ನಡ ಚಲನಚಿತ್ರ ರಂಗದಲ್ಲಿನ ಈ ಐತಿಹಾಸಿಕ ಕ್ಷಣಕ್ಕೆ ಕಾರಣಕರ್ತರಲ್ಲಿ ನಾನೂ ಕೂಡ ಒಬ್ಬನಾದೆ ಅನ್ನೋದು ನನಗೆ ಹೆಮ್ಮೆ ಎಂದಿರುವ ಅವರು, ಒಂದು ಕಡೆ ಪ್ರಶಸ್ತಿಗಳ ಪ್ರವಾಹ, ನಾವು ಸಂಬ್ರಮಿಸಬೇಕಾದ ದಿನ. ಇನ್ನೊಂದು ಕಡೆ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಜನರ ನೋವು, ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾಗಿದೆಯೆಂದು ನಾನು ಬಾವಿಸಿದ್ದೇನೆ ಎಂದು ಹೇಳಿದ್ದಾರೆ.

ಇನ್ನಷ್ಟು...

ಸುದೀರ್ಘ ಬರಹ | ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಒಂದಲ್ಲಾ ಎರಡಲ್ಲಾ ಸಿನಿಮಾ ವಿಮರ್ಶೆ:ಮುಗ್ಧತೆಯ ಹೊತ್ತಿಗೆಯಲ್ಲಿ ಶುದ್ಧ ಮನುಷ್ಯತ್ವದ ಕಥನ

ಕೆಜಿಎಫ್ ಸಿನಿಮಾ ವಿಮರ್ಶೆ:ರಾಕಿಂಗ್ ಸ್ಟಾರ್ ಮತ್ತು ಮೇಕಿಂಗ್ ಸ್ಟಾರ್ ಜುಗಲ್ಬಂದಿ

ಮಂಸೂರೆ ಸಂದರ್ಶನ | ಹೆಣ್ಣೊಬ್ಬಳು ಅನುಭವಿಸುವ ಸಂಕಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.