‘ಭೀಮಸೇನ ನಳಮಹಾರಾಜ’, ‘ಬ್ಲಿಂಕ್’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಭರತ ಕೆ.ತುಮಕೂರು ಕಿರುಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕಿರುಚಿತ್ರಗಳು ಹಾಗೂ ‘ಮಗಳು ಜಾನಕಿ’ ಧಾರವಾಹಿ ಖ್ಯಾತಿಯ ರಾಕೇಶ್ ಮಯ್ಯ ಹಾಗೂ ‘ಕಂಬ್ಳಿಹುಳ’ ಸಿನಿಮಾ ಖ್ಯಾತಿಯ ಅಶ್ವಿತಾ ಹೆಗ್ಡೆ ನಟಿಸಿರುವ, ಭರತ ನಿರ್ದೇಶನದ ‘ನೀನೊಂದು ಶಾಯರಿ’ ಜ.15ರಂದು ಪಿಆರ್ಕೆ ಆಡಿಯೊ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ‘21 ನಿಮಿಷಗಳ ಈ ಕಿರುಚಿತ್ರವು ಸರಳ ಪ್ರೇಮ ಕಥೆಯಾಗಿದ್ದು, ನಮ್ಮೆಲ್ಲರ ಜೀವನದಲ್ಲಿ ನಡೆದಿರಬಹುದಾದ ಒಂದು ಘಟನೆಯನ್ನು ಆಧರಿಸಿ ಮಾಡಲಾಗಿದೆ’ ಎಂದಿದ್ದಾರೆ ಭರತ. ‘ಭಾವನಾತ್ಮಕವಾಗಿ ಪ್ರೀತಿಯ ಜಂಜಾಟದಲ್ಲಿ ಸಿಲುಕಿದ ಹುಡುಗ ಅದರಿಂದ ಆಚೆ ಬರುವ ಪ್ರಕ್ರಿಯೆ ಈ ಚಿತ್ರವಾಗಿದೆ’ ಎನ್ನುತ್ತಾರೆ ಅವರು.

ಕಿರುಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ. ಎಸ್ ಸಂಗೀತ, ಸಂಜೀವ್ ಜಾಗೀರ್ದಾರ್ ಸಂಕಲನ ಹಾಗೂ ಅವಿನಾಶ ಶಾಸ್ತ್ರಿ ಅವರ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.