ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಅವರು ಮೃತಪಟ್ಟು ಇಂದಿಗೆ (ಏಪ್ರಿಲ್ 30) ಎರಡು ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ನೀತು ಕಪೂರ್ ಅವರು ಭಾವುಕ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

'ಡ್ಯಾನ್ಸ್ ದೀವಾನೆ ಜೂನಿಯರ್ಸ್' ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬರ ತಾಯಿ ರಿಷಿ ಕಪೂರ್ ಅವರು ತಮ್ಮ ಪತಿಗೆ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ನೀತು, 'ರಿಷಿ ನಮ್ಮೊಂದಿಗೆ ಇಲ್ಲ. ಆದರೆ, ಪ್ರತಿದಿನ ಯಾರಾದರೂ ಅವರನ್ನು ನೆನಪಿಸುತ್ತಲೇ ಇದ್ದಾರೆ. ಪ್ರತಿಯೊಬ್ಬರೂ ಅವರೊಂದಿಗೆ (ರಿಷಿ ಜೊತೆ) ಒಂದಾದರೂ ಅನುಭವ ಹೊಂದಿದ್ದಾರೆ' ಎಂದು ಭಾವುಕರಾಗಿ ನುಡಿದಿದ್ದರು.

ಅದೇ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನೀತು, 'ಇಂದಿಗೆ ರಿಷಿ ಅವರು ನಮ್ಮನ್ನು ಅಗಲಿ 2 ವರ್ಷ ಕಳೆಯಿತು. 45 ವರ್ಷ ಜೊತೆಗಿದ್ದ ಸಂಗಾತಿಯನ್ನು ಕಳೆದುಕೊಳ್ಳುವುದು ಅತ್ಯಂತ ಕಷ್ಟಕರ ಮತ್ತು ನೋವಿನ ಸಂಗತಿ. ಆ ಸಮಯದಲ್ಲಿ ಮಾನಸಿಕವಾಗಿ ಅವರನ್ನೇ ತುಂಬಿಕೊಳ್ಳುವುದು ಮಾತ್ರವೇ ನನ್ನ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಇದ್ದ ಏಕೈಕ ಮಾರ್ಗ. ಅದನ್ನು ಸಾಧ್ಯವಾಗಿಸಲು ಸಿನಿಮಾಗಳು ಹಾಗೂ ಟಿವಿ ನೆರವಾಗಿವೆ. ಈ ಮೂಲಕ ಅಭಿಮಾನಿಗಳ ಹೃದಯದಲ್ಲೂ ಅವರು ಸದಾ ನೆಲೆಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, 'ರಿಷಿ ಅವರು ನಮ್ಮ ಹೃದಯದಲ್ಲಿ ಸದಾ ಇದ್ದಾರೆ. ಅವರಿಲ್ಲದೆ ಎರಡು ವರ್ಷಗಳು ಕಳೆದಿವೆ ಎಂಬುದನ್ನು ನಂಬಲು ಸಾಧ್ಯವೇ ಆಗುತ್ತಿಲ್ಲ' ಎಂದು ಬರೆದುಕೊಂಡಿದ್ದಾರೆ.

ರಿಷಿ ಕಪೂರ್ ಅವರು ಅನಾರೋಗ್ಯದಿಂದಾಗಿ 2020ರ ಏಪ್ರಿಲ್ 30ರಂದು ನಿಧನರಾದರು.

ರಿಷಿ ಕಪೂರ್ ಪುತ್ರ ಹಾಗೂ ನಟ ರಣಬೀರ್ ಕಪೂರ್ ಅವರು ಇತ್ತೀಚೆಗೆ ನಟಿ ಆಲಿಯಾ ಭಟ್ ಅವರನ್ನು ವಿವಾಹವಾದರು.

ಇದನ್ನೂ ಓದಿ:ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ –ಆಲಿಯಾ: ಶುಭ ಹಾರೈಸಿದ ಪ್ರಿಯಾಂಕಾ ಚೋಪ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.