ಬೆಂಗಳೂರು: ಚೊಚ್ಚಲ ತೆಲುಗು ಚಿತ್ರ ‘ಡಿಜೆ ಟಿಲ್ಲು‘ ಸುದ್ದಿಗೋಷ್ಠಿಯಲ್ಲಿ ನಟಿ ನೇಹಾ ಶೆಟ್ಟಿ ‘ಮಚ್ಚೆ‘ಯ ಬಗ್ಗೆ ಪ್ರಶ್ನೆ ಎದುರಿಸಿ ಮುಜುಗರ ಪಟ್ಟುಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದಿದ್ದ ಡಿಜೆ ಟಿಲ್ಲು ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ತೆಲುಗಿನ ಪತ್ರಕರ್ತರೊಬ್ಬರು ಸಿನಿಮಾದ ನಾಯಕ ನಟ ಸಿಧು ಅವರಿಗೆ ‘ಮಚ್ಚೆ‘ಯ ಕುರಿತು ಪ್ರಶ್ನೆ ಕೇಳಿದ್ದಾರೆ.

ಡಿಜೆ ಟಿಲ್ಲು ಚಿತ್ರದ ಟ್ರೈಲರ್‌ನಲ್ಲಿ ನಾಯಕ ಮತ್ತು ನಾಯಕಿ ನಡೆಸುವ ಸಂಭಾಷಣೆಯಲ್ಲಿ, ನಿನ್ನ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ನಾಯಕ ಕೇಳುತ್ತಾನೆ. ಇದೇ ಪ್ರಶ್ನೆಯನ್ನು ಪತ್ರಕರ್ತರು ಕೂಡ ನಾಯಕ ಸಿಧುವಿಗೆ ಸುದ್ದಿಗೋಷ್ಠಿಯಲ್ಲಿ ಕೇಳುತ್ತಾರೆ.

ನಾಯಕಿಯ ದೇಹದಲ್ಲಿ ಎಷ್ಟು ಮಚ್ಚೆಗಳಿವೆ ಎಂದು ನಿಮಗೆ ಗೊತ್ತಾ ಎಂಬ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದ ನಟ ಸಿಧು, ಏನೂ ಉತ್ತರಿಸದೇ ಸುಮ್ಮನಾಗುತ್ತಾರೆ.

ನಟಿ ನೇಹಾ ಶೆಟ್ಟಿಗೂ ಈ ಪ್ರಶ್ನೆ ಕಿರಿಕಿರಿಯುಂಟುಮಾಡಿದೆ. ಈ ಬಗ್ಗೆ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ಇದೊಂದು ದುರದೃಷ್ಟಕರ ಪ್ರಶ್ನೆಯಾಗಿತ್ತು, ಮಹಿಳೆಯರ ಕುರಿತು ಪತ್ರಕರ್ತ ಹೊಂದಿರುವ ಗೌರವವನ್ನು ಇದು ವ್ಯಕ್ತಪಡಿಸುತ್ತದೆ ಎಂದು ಹೇಳಿದ್ದಾರೆ.

ಮದುವೆಯಲ್ಲಿ ನೃತ್ಯ ಮಾಡಿದ್ದಕ್ಕೆ ಟ್ರೋಲ್ಗೆ ಒಳಗಾದ ಪಾಕ್ ನಟಿ

ಈ ಕುರಿತ ವಿಡಿಯೊ ಕೂಡ ವೈರಲ್ ಆಗಿದ್ದು, ಪತ್ರಕರ್ತರ ನಡೆಯನ್ನು ಜನರು ಟೀಕಿಸಿದ್ದಾರೆ.

ಬುರ್ಖಾ ಧರಿಸಿ ಥಿಯೇಟರ್ನಲ್ಲಿ ಸಿನಿಮಾ ನೋಡಿದ ನಟಿ ಸಾಯಿ ಪಲ್ಲವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.