ಬೆಂಗಳೂರು: ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ನೀಡಿ ಹಾಡಿರುವ ‘ನೋಡು ಶಿವ’ ಆಲ್ಬಂ ಹಾಡು ಆನಂದ್ ಆಡಿಯೋ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದೆ.

ಸುಮಿತ್ ಎಂ.ಕೆ ಹಾಗೂ ಕಿರುತೆರೆ ನಟಿ ಮೇಘಾ ಶೆಟ್ಟಿ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ, ವಿಶೇಷ ಪಾತ್ರದಲ್ಲಿ ಚಂದನ್ ಶೆಟ್ಟಿ ಕೂಡಾ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಕೆ ಆರ್ಟ್ಸ್ ಲಾಂಛನದಲ್ಲಿ ಮೋನಿಕಾ ಕಲ್ಲುರಿ ಅವರು ಈ ಆಲ್ಬಂ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಮೂರುವರೆ ನಿಮಿಷಗಳ ಅವಧಿಯ ಈ ಆಲ್ಬಂ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ವ್ಯೂವ್ಸ್ಗಳನ್ನು ಹಾಡು ಪಡೆದಿದೆ.

ಚಂದನ ಶೆಟ್ಟಿ ಮಾತನಾಡಿ, ‘ಕೋವಿಡ್ ಲಾಕ್ಡೌನ್ ಆರಂಭವಾಗಿ ಒಂದು ವಾರ ಆಗಿತ್ತು. ಸುಮಿತ್ ಅವರು ಕರೆ ಮಾಡಿ, ಹಾಡಿನ ಸಾಹಿತ್ಯ ಕಳುಹಿಸಿದ್ದರು. ಅದು ಚೆನ್ನಾಗಿತ್ತು. ಇದಕ್ಕೆ ಟ್ಯೂನ್ ಮಾಡುವಂತೆಯೂ ಹೇಳಿದರು. ಹಾಡನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲಾಗಿದೆ’ ಎಂದರು.

‘ಜೀವನದಲ್ಲಿ ಹಲವು ಸೋಲಿನ ಬಳಿಕ ಒಂದು ಗೆಲುವು ಇದ್ದೇ ಇರುತ್ತದೆ. ಮೊದಲಿಗೆ ಸಣ್ಣ ಬಜೆಟ್ನಲ್ಲಿ ಅನಿಮೇಷನ್ ವಿಡಿಯೋ ಮಾಡಬೇಕು ಎಂದು ನಿರ್ಧಾರವಾಯಿತು. ಮೋನಿಕಾ ಕಲ್ಲೂರಿ ಅವರು ತಂಡಕ್ಕೆ ಸೇರಿಕೊಂಡ ನಂತರ ಹಾಡಿನ ರೂಪವೇ ಬದಲಾಯ್ತು’ ಎಂದು ಸುಮಿತ್ ಎಂ.ಕೆ ಹೇಳಿದರು. ಹಿರಿಯ ನಿರ್ದೇಶಕ ಭಗವಾನ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬನ್ನೇರುಘಟ್ಟ ರಸ್ತೆಯ ಎ.ಎಂ.ಸಿ ಇಂಜನಿಯರಿಂಗ್ ಕಾಲೇಜ್ ಆವರಣದಲ್ಲಿ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಸುಮಾರು 60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಹಾಡಿನಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮಟ್ಟಿಗೆ ಇಷ್ಟು ಅದ್ದೂರಿಯಾಗಿ ಮೂಡಿಬಂದಿರುವ ಮೊದಲ ಆಲ್ಬಂ ಹಾಡು ಇದಾಗಿದೆ ಎಂದು ತಂಡವು ಹೇಳಿದೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಹೆಬ್ಬುಲಿ ಖ್ಯಾತಿಯ ಕರುಣಾಕರ್ ಅವರ ಛಾಯಾಗ್ರಹಣ ಈ ಇದಕ್ಕಿದೆ.

ಹಾಡಿನ ಲಿಂಕ್:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.