ಚಿತ್ರರಂಗದ ಅನೇಕ ಕಲಾವಿದರು, ಕೊರೊನಾ ವೈರಸ್ ಸೋಂಕು – ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ನಿಂತಿದ್ದಾರೆ. ಈಗ ನಟಿ ಪ್ರಣೀತ ಸುಭಾಷ್ ಅವರೂ, ಕಳೆದ ಒಂದು ತಿಂಗಳಿನಿಂದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂಕಟದಲ್ಲಿರುವ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಬಡವರು, ನಿರ್ಗತಿಕರಿಗೆ ಆಹಾರ ಪೂರೈಸುತ್ತಿದ್ದಾರೆ.

ಪ್ರಣೀತಾ ಅವರು, #HelpTheHelpingHands ಎಂಬ ಪರಿಕಲ್ಪನೆಯಡಿ ತಮ್ಮ ಫೌಂಡೇಷನ್ ಮತ್ತು ಇತರೆ ಸಂಘಟನೆಗಳ ಮೂಲಕ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ 50 ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ. ಇದಕ್ಕಾಗಿ ತಮ್ಮ ಫೌಂಡೇಷನ್‌ನಿಂದ ₹ 1 ಲಕ್ಷ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಈಗಾಗಲೇ ಕಳೆದ ಒಂದು ತಿಂಗಳಿನಿಂದ ಸಂಕಷ್ಟದಲ್ಲಿರುವವರಿಗೆ ಪ್ರಣೀತ ಊಟದ ವ್ಯವಸ್ಥೆ ಮಾಡಿದ್ದಾರೆ.

ಪ್ರಣೀತಾ ಫೌಂಡೇಷನ್ ಜತೆ ಕೈಜೋಡಿಸಿರುವ ಸಂಘಟನೆಗಳು ಸುಮಾರು 500 ಕುಟುಂಬಗಳಿಗೆ ನೆರವಾಗಲು ಯೋಜನೆ ರೂಪಿಸಿವೆ. ಒಂದು ಕುಟುಂಬಕ್ಕೆ ₹ 2ಸಾವಿರದಂತೆ ಖರ್ಚಾಗುತ್ತದೆ. ಈ ಹಣದಲ್ಲಿ ಅವಶ್ಯವಿರುವವರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿದ್ದಾರೆ. ‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ನನ್ನ ಫೌಂಡೇಷನ್ ಮೂಲಕ ಒಂದಷ್ಟು ನೆರವಿಗೆ ಮುಂದಾಗಿದ್ದೇನೆ. ನೀವೂ ಇದರಲ್ಲಿ ಕೈಜೋಡಿಸಿ‘ ಎಂದು ಪ್ರಣೀತಾ ಮನವಿ ಮಾಡಿದ್ದಾರೆ. ಈ ವಿವರಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.