ಮುಂಬೈ: ನಟಿ, ಉದ್ಯಮಿ ಪ್ರೀತಿ ಜಿಂಟಾ ಅವರು ಇತ್ತೀಚೆಗೆ ಮುಂಬೈಗೆ ಭೇಟಿ ನೀಡಿದ ವೇಳೆ ಅನುಭವಿಸಿದ ಎರಡು ಕಿರುಕುಳ ಘಟನೆಗಳ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮಹಿಳೆಯೊಬ್ಬರು ನನ್ನ ಮಗಳು ಗಿಯಾನೊಂದಿಗೆ ಫೋಟೊ ತೆಗೆದುಕೊಳ್ಳಲು ಬಯಸಿದರು. ನಾನು ನಯವಾಗಿ ತಿರಸ್ಕರಿಸಿದೆ. ಅಷ್ಟಕ್ಕೆ ಸುಮ್ಮನಾಗದ ಮಹಿಳೆ ಮಗಳನ್ನು ತಬ್ಬಿ ಹಿಡಿದು ತುಟಿಯ ಬಳಿ ಮುತ್ತಿಟ್ಟು ‘ಎಷ್ಟು ಮುದ್ದಾದ ಮಗು’ ಎಂದು ಹೇಳುತ್ತಾ ಕಾಲ್ಕಿತ್ತರು. ಮನೆಯ ಹೂದೋಟದಲ್ಲಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನಾನೊಬ್ಬ ಸೆಲೆಬ್ರಿಟಿ ಆಗಿರದಿದ್ದರೆ ಬೇರೆ ರೀತಿಯೇ ಪ್ರತಿಕ್ರಿಯಿಸುತ್ತಿದ್ದೆ. ಆದರೆ ಅದನ್ನೇ ದೊಡ್ಡ ವಿಷಯ ಮಾಡಬಾರದೆಂದು ಸುಮ್ಮನಾದೆ’ ಎಂದು ಬರೆದುಕೊಂಡಿದ್ದಾರೆ.

‘ಇನ್ನೊಮ್ಮೆ, ವಿಮಾನ ನಿಲ್ದಾಣದತ್ತ ಸಾಗುತ್ತಿರುವಾಗ ಅಂಗವಿಕಲ ವ್ಯಕ್ತಿಯೊಬ್ಬರು ಹಣ ನೀಡಲಿಲ್ಲ ಎಂದು ಸಿಟ್ಟಾದರು. ಹಲವು ವರ್ಷಗಳಿಂದ ಅವರು ಹಣಕ್ಕಾಗಿ ಪೀಡಿಸುತ್ತಾರೆ. ಸಾಧ್ಯವಾದಾಗಲೆಲ್ಲಾ ನಾನು ನೀಡಿದ್ದೇನೆ. ಆದರೆ ಈ ಬಾರಿ ಅವರು ಕೇಳಿದಾಗ ‘ಕ್ಷಮಿಸಿ, ನನ್ನ ಬಳಿ ನಗದು ಇಲ್ಲ’ ಎಂದು ಹೇಳಿದೆ. ನನ್ನ ಜೊತೆಗಿದ್ದ ಮಹಿಳೆ ಒಂದಷ್ಟು ಹಣ ನೀಡಿದರು. ಆದರೆ ಅದು ಸಾಲುವುದಿಲ್ಲ ಎಂದು ಅವರು ವಾಪಸ್ ಎಸೆದು, ಆಕ್ರಮಣಕಾರಿಯಾಗಿ ವರ್ತಿಸಿದರು’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೇ, ಸೆಲೆಬ್ರಿಟಿಗಳೂ ಮನುಷ್ಯರು ಎಂದು ಜನರು ಅರ್ಥ ಮಾಡಿಕೊಳ್ಳಲು ಇದು ಸರಿಯಾದ ಸಮಯ. ನಾನು ಮೊದಲು ಒಬ್ಬ ಮನುಷ್ಯಳು, ನಂತರ ತಾಯಿ ಮತ್ತು ಸೆಲೆಬ್ರಿಟಿ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.