ಬೆಂಗಳೂರು: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ, ಗಾಯಕ ನಿಕ್ ಜೋನಸ್ ಅವರು ಮಗಳಿಗೆ ‘ಮಾಲತಿ ಮೇರಿ’ (Malti Marie) ಎಂದು ನಾಮಕರಣ ಮಾಡಿದ್ದಾರೆ.

ಜನನ ಪ್ರಮಾಣ ಪತ್ರದಲ್ಲಿ ಮಗುವಿನ ಹೆಸರನ್ನು ‘ಮಾಲತಿ ಮೇರಿ’ ಎಂದು ಉಲ್ಲೇಖಿಸಲಾಗಿದೆ.

ಪ್ರಿಯಾಂಕಾ– ನಿಕ್ ದಂಪತಿ ತಾವು ಬಾಡಿಗೆ ತಾಯ್ತನದ (ಸರೊಗಸಿ) ಮೂಲಕ ಮಗು ಪಡೆದಿರುವುದಾಗಿ ಜನವರಿಯಲ್ಲಿ ಘೋಷಿಸಿದ್ದರು.

ಓದಿ... 'ಡೆಲ್ಲಿ ಫೈಲ್ಸ್' ಚಿತ್ರಕ್ಕೆ ಸಿಖ್ ಸಂಘಟನೆ ವಿರೋಧ: ಅಗ್ನಿಹೋತ್ರಿ ಹೇಳಿದ್ದೇನು?

‘ನಾವು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದೇವೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರೂ ನಮ್ಮ ಖಾಸಗಿತನವನ್ನು ಗೌರವಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಈಗ ನಮ್ಮ ಕುಟುಂಬದ ಮೇಲೆ ಗಮನ ಹರಿಸಿದ್ದೇವೆ’ ಎಂದು ಪ್ರಿಯಾಂಕಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹೇಳಿಕೊಂಡಿದ್ದರು.

ಪ್ರಿಯಾಂಕಾ ಹಾಗೂ ನಿಕ್ ಜೋನಸ್ ದಂಪತಿ 2018 ರ ಡಿಸೆಂಬರ್‌ನಲ್ಲಿ ಜೈಪುರದಲ್ಲಿ ಮದುವೆಯಾಗಿದ್ದರು. ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.

‘ಸಿಟಾಡೆಲ್’ ವೆಬ್ ಸೀರಿಸ್‌ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದರು. ಸದ್ಯ ಫರ್ಹಾನ್ ಅಖ್ತರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಜೀ ಲೆ ಜರಾ’ ಚಿತ್ರದಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಅವರೊಂದಿಗೆ ಪ್ರಿಯಾಂಕಾ ಅಭಿನಯಿಸಲಿದ್ದಾರೆ.

ಓದಿ...ಸರೊಗಸಿ ಮೂಲಕ ಮಮ್ಮಿಯಾದ ಪ್ರಿಯಾಂಕಾ ಚೋಪ್ರಾ: ಏನಿದು ಬಾಡಿಗೆ ತಾಯ್ತನ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.