‘ಸಲಗ’ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಿದ್ದ ಸಿದ್ದಿ ಸಹೋದರಿಯರು(ಗಿರಿಜಾ ಹಾಗೂ ಗೀತಾ) ಇದೀಗ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ನಟಿ ಪ್ರಿಯಾಂಕ ಉಪೇಂದ್ರ ನಟನೆಯ, ಗುರುಮೂರ್ತಿ ನಿರ್ದೇಶನದ ‘ಉಗ್ರಾವತಾರ’ ಸಿನಿಮಾದ ಹಾಡೊಂದಕ್ಕೆ ಸಹೋದರಿಯರು ಧ್ವನಿಯಾಗಿದ್ದು, ಪ್ರಿಯಾಂಕ ಅವರೂ ಇಲ್ಲಿ ಹೆಜ್ಜೆ ಹಾಕಿದ್ದಾರೆ.

ನಟ ಉಪೇಂದ್ರ ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆಗೊಳಿಸಿದರು. ‘ಸಿದ್ದಿ ಸಹೋದರಿಯರ ಕಂಠದಲ್ಲಿ ಮ್ಯಾಜಿಕ್ ಇದೆ. ‘ಸಲಗ’ದಲ್ಲಿ ದೂಳ್ ಎಬ್ಬಿಸಿದ್ದೀರಿ. ಇದರಲ್ಲಿ ಪ್ರಿಯಾಂಕ ಅವರೊಂದಿಗೆ ಹೆಜ್ಜೆ ಹಾಕಿದ್ದೀರಿ. ಬಹಳ ವರ್ಷಗಳ ನಂತರ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರವೊಂದು ಬರುತ್ತಿದೆ. ಸಾಹಸ ಚಿತ್ರದಲ್ಲಿ ಮಾಲಾಶ್ರೀ, ಅದರ ಹಿಂದೆ ಮಂಜುಳಾ ಅವರು ನಟಿಸುತ್ತಿದ್ದರು. ಈ ಪಾತ್ರಕ್ಕೆ ಪ್ರಿಯಾಂಕ ಸೂಕ್ತ ನಟಿ’ ಎಂದರು ಉಪೇಂದ್ರ.

ಪ್ರಿಯಾಂಕ ಮಾತನಾಡಿ, ‘ಈ ಪಾತ್ರವನ್ನು ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆ ಕಾಡಿತ್ತು. ಸವಾಲಾಗಿ ಇದನ್ನು ತೆಗೆದುಕೊಂಡೆ. ಡ್ಯೂಪ್ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದೇನೆ. ಅದಕ್ಕಾಗಿ ತರಬೇತಿಯನ್ನೂ ಪಡೆದಿದ್ದೆ. ಮಹಿಳೆಯರು ಶೋಷಣೆಗೆ ಒಳಗಾಗಿ, ಯಾವೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಹಾಗೂ ಅವರ ರಕ್ಷಣೆಗೆ ನಿಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.