ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ ಸಿನಿಮಾದಲ್ಲಿ ನಟಿಸುತ್ತಿರುವುದು ಈಗಾಗಲೇ ಗೊತ್ತಿರುವ ವಿಷಯ. ಆ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ, ಫೈಂಟಿಂಗ್ ದೃಶ್ಯಗಳಲ್ಲಿ ಡೂಪ್ ಇಲ್ಲದೇ ಪಾಲ್ಗೊಂಡಿದ್ದಾರೆ.

ಅತ್ಯಾಚಾರ ಪ್ರಕರಣವೊಂದರ ತನಿಖೆಯ ಜಾಡು ಹಿಡಿದು ಹೊರಟ ಇನ್ಸ್ಪೆಕ್ಟರ್ ಶ್ರೀದುರ್ಗಿ, ಈ ದಾರಿಯಲ್ಲಿ ಎದುರಾಗುವ ಕ್ಲಿಷ್ಟ ಸನ್ನಿವೇಶಗಳ ಜತೆಯ ಹೋರಾಟವೇ ‘ಉಗ್ರಾವತಾರ‘ದ ಕತೆ. ಮರ್ಡರ್ ಮಿಸ್ಟರಿ ಹಂದರವಿರುವ ಚಿತ್ರದಲ್ಲಿ ಪ್ರಿಯಾಂಕಾ ಅವರಿಗಾಗಿಐದು ವಿಶೇಷ ಫೈಟ್ ಸೀನ್ಗಳನ್ನು ಸಂಯೋಜಿಸಲಾಗಿದೆ. ಆ ಪೈಕಿ ಗೋದಾಮಿನಲ್ಲಿ ನಡೆಯುವ ಒಂದು ಫೈಟ್ ದೃಶ್ಯದ ಚಿತ್ರೀಕರಣಈಗಾಗಲೇ ಮುಗಿದಿದೆ. ಸಂಭಾಷಣೆ ಸೇರಿ ಒಟ್ಟು 8 ನಿಮಿಷದ ಈ ಫೈಟ್ ಸೀನ್ನಲ್ಲಿ ಪ್ರಿಯಾಂಕಾ ಒಬ್ಬರೇ20 ರೌಡಿಗಳ ಜತೆ ಹೋರಾಡುತ್ತಾರೆ.

ಸಾಹಸ ದೃಶ್ಯಗಳು ನೈಜವಾಗಿ ಮೂಡಿಬರಲೆಂದು ಪ್ರಿಯಾಂಕಾಅವರು ಮೂರು ದಿನ ಮನೆಯಲ್ಲೇ ರಿಹರ್ಸಲ್ ಮಾಡಿದ್ದಾರಂತೆ.ಫಿಟ್ನೆಸ್ಗಾಗಿ,ತರಬೇತುದಾರ ಜೀತು,ಪ್ರಿಯಾಂಕಾ ಅವರಿಗೆ ವರ್ಕೌಟ್ ಮಾಡಿಸುತ್ತಿದ್ದಾರೆ.

‘ಈ ಮೊದಲು ಬರಿ ಕಾರ್ಡಿಯೊ ವರ್ಕೌಟ್ ಮಾಡುತ್ತಿದ್ದೆ. ಈ ಸಿನಿಮಾಕ್ಕಾಗಿ ದೇಹದ ಶಕ್ತಿ ಹೆಚ್ಚಿಸುವ ಹಲವು ವ್ಯಾಯಾಮವನ್ನು ಜೀತು ಮಾಡಿಸುತ್ತಿದ್ದಾರೆ. ಕೊರೊನಾ ಲಾಕ್ಡೌನ್ನಿಂದಾಗಿ ಮೂರು ತಿಂಗಳು ಮನೆಗೆಲಸದಲ್ಲೇ ಕಳೆದುಹೋಗಿದ್ದೆ. ಲಾಕ್ಡೌನ್ ತೆರವಾದ ನಂತರ ನಮ್ಮ ಮನೆಯಲ್ಲೇ ತರಬೇತಿ ನೀಡುತ್ತಿದ್ದಾರೆ. ನನ್ನೊಂದಿಗೆ ಉಪೇಂದ್ರಹಾಗೂ ಮಗ ಕೂಡ ವರ್ಕೌಟ್ ಮಾಡುತ್ತಾರೆ‘ ಎನ್ನುತ್ತಾರೆ ಪ್ರಿಯಾಂಕಾ.

ಜೀತು, ಪ್ರಿಯಾಂಕಾ ಅವರ ಆಹಾರದ ಬಗ್ಗೆಯೂ ನಿಗಾ ವಹಿಸುತ್ತಿದ್ದಾರೆ. ವರ್ಕೌಟ್ ಜತೆಗೆ ಪೌಷ್ಟಿಕ ಆಹಾರ ಸೇವನೆ ಮುಖ್ಯ ಎನ್ನುವುದು ಜೀತು ಅಭಿಪ್ರಾಯ. ’ಫೈಟಿಂಗ್ ದೃಶ್ಯಗಳಿಗೆ ಬೇಕಾದಂತೆ ದೇಹವನ್ನು ಹುರಿಗೊಳಿಸುತ್ತೇವೆ. ಕೈ ಕಾಲು, ಸೊಂಟ ಎಲ್ಲವೂ ಫ್ಲೆಕ್ಸಿಬಲ್ ಆಗಿರಬೇಕು‘ ಎನ್ನುತ್ತಾರೆ ಜೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.