ಬೆಂಗಳೂರು: ಚಂದನವನದಲ್ಲಿ ನಿರ್ದೇಶಕ ಗುರುಪ್ರಸಾದ್ ಮತ್ತು ನಟ ಜಗ್ಗೇಶ್ 15 ವರ್ಷಗಳ ನಂತರ ಮತ್ತೆ ಒಂದಾಗಿ ಬಂದಿದ್ದಾರೆ.

ಇವರಿಬ್ಬರ ಜೋಡಿಯ ‘ರಂಗನಾಯಕ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಸಿನಿಮಾ ಮಾರ್ಚ್ 8ರಂದು ತೆರೆ ಕಾಣುತ್ತಿದೆ.

15 ವರ್ಷಗಳ ಹಿಂದೆ ಜಗ್ಗೇಶ್ ಅಭಿನಯದ, ಗುರುಪ್ರಸಾದ್ ನಿರ್ದೇಶನದ ‘ಮಠ‘ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರ ಹಿಟ್ ಆಗಿತ್ತು. ಇದೀಗ ಈ ಜೋಡಿ ರಂಗನಾಯಕ ಸಿನಿಮಾದ ಮೂಲಕ ಮತ್ತೆ ಒಂದಾಗಿದೆ.

ಹದವಾದ ಹಾಸ್ಯದೊಂದಿಗೆ ಕನ್ನಡ ಹೋರಾಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಟ್ರೈಲರ್ನಲ್ಲಿ ಜಗ್ಗೇಶ್ ರಂಗಭೂಮಿ ನಟರಾಗಿ ಕಾಣಿಸಿಕೊಂಡಿದ್ದಾರೆ.

ಪುಷ್ಪಕ ವಿಮಾನ’ ಖ್ಯಾತಿಯ ನಿರ್ಮಾಪಕ ವಿಖ್ಯಾತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಗ್ಗೇಶ್, ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.