ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರಿಗೆ ‘83’ ಚಿತ್ರದ ನಾಯಕ ನಟ ರಣವೀರ್ ಸಿಂಗ್ ಶುಭಾಶಯ ಕೋರಿದ್ದಾರೆ.

ಕಪಿಲ್ ದೇವ್ ಜೊತೆಗಿನ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅವರು, ‘ಕಪಿಲ್ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಚಾಂಪಿಯನ್ ಸ್ಪೂರ್ತಿಯನ್ನು ಪರದೆಯ ಮೇಲೆ ಸಾಕಾರಗೊಳಿಸಿರುವುದು ಎಂತಹ ಗೌರವದ ವಿಚಾರ’ ಎಂದು ತಿಳಿಸಿದ್ದಾರೆ.

ಕಪಿಲ್ ದೇವ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1983ರ ವಿಶ್ವಕಪ್ ಗೆದ್ದ ಐತಿಹಾಸಿಕ ದಿನದ ಕತೆಯನ್ನು ‘83’ ಚಿತ್ರವು ಒಳಗೊಂಡಿದೆ. ರಣವೀರ್ ಸಿಂಗ್ ಅವರು ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಡಿಸೆಂಬರ್ 24ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಣವೀರ್ ಅವರ ಅಭಿನಯದ ಕುರಿತು ಮಾತನಾಡಿದ್ದ ಕಪಿಲ್ ದೇವ್, ‘ರಣವೀರ್ ಒಬ್ಬ ಶ್ರೇಷ್ಠ ನಟ. ಅವರಿಗೆ ಯಾವುದೇ ಇನ್ಪುಟ್ಗಳು ಅಥವಾ ಯಾವುದೇ ಸಹಾಯದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ನನ್ನೊಂದಿಗೆ ಕೇವಲ ಸಮಯ ಕಳೆದರು ಮತ್ತು ವಿಶ್ರಾಂತಿ ಪಡೆದರು. ಅವರು ಸಾಕಷ್ಟು ಬುದ್ಧಿವಂತರು’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.