ಕಳೆದ ವಾರವಷ್ಟೇ ‘ವರ್ಷದ ಸೂಪರ್‌ಸ್ಟಾರ್’ ಪ್ರಶಸ್ತಿಯನ್ನು ಬಾಚಿಕೊಂಡ ಬಾಲಿವುಡ್‌ನ ‘ಸಿಂಬಾ’ ಸೋಷಿಯಲ್ ಮೀಡಿಯಾದಲ್ಲಿ ಹೊಸ ಅವತಾರದಿಂದಾಗಿ ಸುದ್ದಿಯಲ್ಲಿದ್ದಾರೆ.

ಪತ್ನಿದೀಪಿಕಾ ಪಡುಕೋಣೆ ಜೊತೆಗಿನ ರಸನಿಮಿಷಗಳನ್ನೂ ಬಿಡದೆಸೋಷಿಯಲ್ ಮೀಡಿಯಾದ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ರಣವೀರ್ ಇದೀಗ ತಮ್ಮದೇ ‘ಜಿಪ್’ ವಿಡಿಯೊ ಮತ್ತು ಸ್ಟಿಕ್ಕರ್‌ಗಳನ್ನು ಹರಿಯಬಿಟ್ಟಿದ್ದಾರೆ. ಭಾರತದ ನಟರು ಹೀಗೆ ಜಿಪ್ ವಿಡಿಯೊ ಮತ್ತು ಸ್ಟಿಕ್ಕರ್‌ಗಳನ್ನು ಟ್ವಿಟರ್‌ನಂತಹ ಪ್ರಬಲ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಕಡಿಮೆ.

ಜಿಪ್ ವಿಡಿಯೊದಲ್ಲಿ ಮೂರು ಬಗೆಯ ದೃಶ್ಯಗಳಲ್ಲಿ ರಣವೀರ್ ಕಾಣಿಸಿಕೊಂಡಿದ್ದಾರೆ. ಅವರ ಅಧಿಕೃತ ಟ್ವಿಟರ್ ಖಾತೆ@RanveerOfficial ತೆರೆಯುತ್ತಿದ್ದಂತೆ ಭೂಗತದಿಂದ ಎದ್ದುಬರುವಂತೆ ಧಿಗ್ಗನೆ ಪ್ರತ್ಯಕ್ಷರಾಗುವ ರಣವೀರ್ ‘ಹಾಯ್’ ಎಂದು ಕೈಬೀಸುತ್ತಾರೆ. ಎರಡನೇ ವಿಡಿಯೊ ಸ್ಟಿಕ್ಕರ್‌ನಲ್ಲಿ ಅವರು ನಾಚಿ ನೀರಾಗುತ್ತಾರೆ. ಮೂರನೆಯದರಲ್ಲಿ ಟಪ್ಪಾಂಗುಚ್ಚಿಯಂತೆ ನಿಂತಲ್ಲೇ ಮೈಕೈ ಕುಣಿಸುತ್ತಾರೆ. ಪ್ರತಿ ವಿಡಿಯೊವನ್ನೂ ಆವರಿಸಿಕೊಳ್ಳುವಂತೆ ‘ಜಿಪ್ ಆರ್ ಲೈವ್!’ ಎಂಬ ಒಕ್ಕಣೆ ಇದೆ.

ಟ್ವಿಟರ್‌ನಲ್ಲಿ ಒಂದು ಕೋಟಿಗೂ ಅಧಿಕ ಮಂದಿ ಫಾಲೋವರ್‌ಗಳನ್ನು ಹೊಂದಿರುವ ರಣವೀರ್, 854 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ಜಿಪ್ ವಿಡಿಯೊ ಪೋಸ್ಟ್ ಮಾಡಿದ ಮೂರೇ ಗಂಟೆಯೊಳಗೆ 19 ಸಾವಿರಕ್ಕೂ ಹೆಚ್ಚು ಮಂದಿ ಅದನ್ನು ವೀಕ್ಷಣೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.