ಹುಬ್ಬಳ್ಳಿ: ನಗರದ ಬೆಂಗೇರಿಯ ಸ್ಮಾರ್ಟ್ ಸಿಟಿ ಸಂತೆ ಮೈದಾನದಲ್ಲಿ ಶನಿವಾರ ತಾಜ್ ಮಹಲ್–2 ಚಿತ್ರದ ಆಡಿಯೊ ಸಿ.ಡಿ.ಯನ್ನು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಶೆಟ್ಟರ್, ಹುಬ್ಬಳ್ಳಿ ಸ್ಮಾರ್ಟ್ ಸಿಟಿಯಾಗುತ್ತಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲಾದ ನಗರದಲ್ಲಿ ಸಿನಿಮಾಗಳ ಶೂಟಿಂಗ್ ಹೆಚ್ಚಾಗಬೇಕು. ಇಲ್ಲಿಯ ಪ್ರವಾಸಿ ತಾಣ, ಉದ್ಯಾನ ಹಾಗೂ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಬೇಕು ಎಂದರು.

ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಕಲಾವಿದರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ದೊರೆಯಬೇಕು ಎಂದು ಹೇಳಿದರು.

ಗಾನತರಂಗ ಮತ್ತು ವಿಜನ್ ಪ್ಲೈ ಸಂಸ್ಥೆ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ಚಿತ್ರದ ನಿರ್ದೇಶಕ, ನಾಯಕ ನಟ ದೇವರಾಜ್ ಕುಮಾರ, ಸಹ ನಟ ರಿತೇಶ, ಉದ್ಯಮಿ ವಿ.ಎಸ್.ವಿ. ಪ್ರಸಾದ, ಪತ್ರಕರ್ತ ಗಣಪತಿ ಗಂಗೊಳ್ಳಿ, ಬೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಸಾವುಕಾರ, ರಮೇಶ ಮಹಾದೇವಪ್ಪನವರ, ವೀರೇಶ ಸಂಗಳದ, ಶೇಖರಯ್ಯ ಮಠಪತಿ, ವೆಂಕಟೇಶ ಚಾಟೆ, ಎ. ಶೇಕ, ಡಾ. ಕಲ್ಮೇಶ ಹಾವೇರಿಪೇಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.