‘ಪ್ಲೀಸ್ ಪಪ್ಪಾ, ವಾಪಸ್ ಬಂದ್ಬಿಡಿ..’

ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಬಾಲಿವುಡ್ ನಟ ರಿಷಿಕಪೂರ್ ಅವರ ಪುತ್ರಿ ರಿದ್ದಿಮಾ ‘ಅಪ್ಪನ ದಿನ‘ದಂದು ತಮ್ಮ ತಂದೆಯನ್ನು ಹೀಗೆ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

‘ಅಪ್ಪಂದಿರ ದಿನದ ಶುಭಾಶಯಗಳು ಪಪ್ಪಾ!ನಾನು ಜೀವನದ ಪ್ರತಿ ಕ್ಷಣ, ಪ್ರತಿ ಹೆಜ್ಜೆಯಲ್ಲೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಅನುದಿನವೂ ಅಪ್ಪನ ದಿನವೇ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

‘ಪಪ್ಪಾ, ನಾನು ನಿನ್ನನ್ನು ನೆನಪಿಸಿಕೊಳ್ಳದ ದಿನವಿಲ್ಲ. ನೀನು ಮತ್ತೆ ಬದುಕಿ ಬರಲಿ ಎಂದು ಮನಸ್ಸು ಕೇಳುತ್ತದೆ. ಆದರೆ, ಕ್ಯಾನ್ಸರ್‌ನಿಂದ ನೀನು ಅನುಭವಿಸಿದ ಯಾತನೆ ನೆನಪಿಸಿಕೊಂಡರೆ ಮನಸ್ಸು ಭಾರವಾಗುತ್ತದೆ. ಅದನ್ನು ನನ್ನಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ. ಬೇಡ ನೀನು ಅಲ್ಲಿಯೇ ನೆಮ್ಮಿದಿಯಿಂದ ಇದ್ದುಬಿಡು’ ಎಂದು ಹೇಳಿದ್ದಾರೆ.ರಿಷಿ ಜತೆಗಿರುವ ಹಳೆಯ ಫೋಟೊಗಳನ್ನು ಅವರು ಇನ್‌ಸ್ಟಾಂಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಅಪ್ಪನ ನೆನಪು | ‘ಅಮ್ಮನಂತಹ ಅಪ್ಪ...’

‘ಪಪ್ಪಾ, ಹೌದು! ನೀನು ಭೌತಿಕವಾಗಿ ಮಾತ್ರ ನಮ್ಮೊಂದಿಗೆ ಇಲ್ಲ. ಆದರೆ, ಜೀವನದ ಪ್ರತಿ ಘಳಿಗೆಯಲ್ಲೂ ನಮ್ಮೊಂದಿರುವೆ. ನಮ್ಮ ಉಸಿರಿನಲ್ಲಿ ಬೆರೆತಿರುವೆ. ನಾವು ನಿನ್ನನ್ನೇ ಜೀವಿಸುತ್ತಿದ್ದೇವೆ. ಆದರೂ, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ನೆನಪು ಬಂದಾಗಲೆಲ್ಲ ಮನಸ್ಸು ಭಾರವಾಗುತ್ತದೆ. ಲವ್ ಯೂ ಪಪ್ಪಾ...’ ಎಂದು ಬರೆದಿರುವ ರಿದ್ಧಿಮಾ ಪೋಸ್ಟ್ ಮನಸ್ಸಿಗೆ ತಟ್ಟುತ್ತದೆ.

ತನ್ನ ಮುದ್ದು ಮಕ್ಕಳ ಪರವಾಗಿ ಪತಿ ಭರತ್ ಸಾಹ್ನಿಗೆ ರಿದ್ದಿಮಾ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ್ದಾರೆ. ರಿಷಿ ನೆನಪಿನಲ್ಲಿ ಅವರ ಕುಟುಂಬ ಈಚೆಗೆ ಪುಟ್ಟ ಪಗ್ ನಾಯಿ ಮರಿಯೊಂದನ್ನು ಮನೆಗೆ ತಂದಿದೆ. ಅದಕ್ಕೆ ‘ಡೂಡಲ್ ಕಪೂರ್’ ಎಂದು ಹೆಸರಿಟ್ಟಿದೆ.ಲ್ಯೂಕೇಮಿಯಾ ಕ್ಯಾನ್ಸರ್‌ಗೆ ತುತ್ತಾಗಿದ್ದ 67 ವರ್ಷದ ರಿಷಿ ಕಪೂರ್ ಏಪ್ರಿಲ್ 30ರಂದು ಮುಂಬೈನ ಎಚ್.ಎನ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.