ತಮಿಳು ಚಿತ್ರದ ಮೂಲಕ ಸಿನಿಮಾ ನಿರ್ಮಾಣಕ್ಕೆ ಕಾಲಿಟ್ಟಿರುವ ಕ್ರಿಕೆಟ್ ಆಟಗಾರ ಎಮ್.ಎಸ್. ಧೋನಿ ಅವರ ಪತ್ನಿ ಸಾಕ್ಷಿ ಧೋನಿಗೆ ತೆಲುಗು ನಟ ಅಲ್ಲು ಅರ್ಜುನ್ ಅಚ್ಚು ಮೆಚ್ಚಿನ ನಟನಂತೆ. ಅಲ್ಲು ಅರ್ಜುನ್ ಅವರ ಎಲ್ಲ ಸಿನಿಮಾಗಳನ್ನು ಒಂದೂ ಬಿಡದೆ ನೋಡಿರುವುದಾಗಿ ಸ್ವತಃ ಸಾಕ್ಷಿ ಹೇಳಿಕೊಂಡಿದ್ದಾರೆ.

'ಲೆಟ್ಸ್ ಗೆಟ್ಸ್ ಮ್ಯಾರೀಡ್'(ಎಲ್ಜಿಎಮ್) ಚಿತ್ರದ ಪ್ರಮೋಶನ್ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾಕ್ಷಿ, ನಟ ಅಲ್ಲು ಅರ್ಜುನ್ ಅವರನ್ನು ಹಾಡಿ ಹೊಗಳಿದ್ದಾರೆ.

'ಆಗೆಲ್ಲ ಸಿನಿಮಾ ನೋಡಲು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ನಂತಹ ಒಟಿಟಿ ಪ್ಲಾಟ್ಫಾರ್ಮ್ಗಳು ಇರಲಿಲ್ಲ. ತೆಲುಗು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯುಟ್ಯೂಬ್ನಲ್ಲಿ ಹಾಕುತ್ತಿದ್ದರು. ಗೋಲ್ಡ್ಮೈನ್ ಪ್ರೊಡಕ್ಷನ್ಸ್ ಎಂಬ ಯುಟ್ಯೂಬ್ ಚಾನೆಲ್ನಲ್ಲಿ ಅಲ್ಲು ಅರ್ಜುನ್ ಅವರ ಎಲ್ಲ ಸಿನಿಮಾಗಳು ಹಿಂದಿಯಲ್ಲಿ ಸಿಗುತ್ತಿದ್ದವು. ಅವುಗಳನ್ನೆಲ್ಲ ನೋಡಿದ್ದೆ. ನೋಡುತ್ತಾ ನೋಡುತ್ತಾ ಅವರ ಅಭಿಮಾನಿಯಾದೆ' ಎಂದು ಹೇಳಿದರು.

'ಧೋನಿ ಎಂಟರ್ಟೈನ್ ಮೆಂಟ್' ನಿರ್ಮಾಣ ಸಂಸ್ಥೆಯಡಿ ತಯಾರಾಗುತ್ತಿರುವ 'ಲೆಟ್ಸ್ ಗೆಟ್ಸ್ ಮ್ಯಾರೀಡ್' ಚಿತ್ರ ಇನ್ನೇನು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿದ್ದು, ಚಿತ್ರ ಬಿಡುಗಡೆಗಾಗಿ ಧೋನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಪುಷ್ಟ ಚಿತ್ರದ ಮೂಲಕ ಟ್ರೆಂಡ್ ಸೆಟ್ ಮಾಡಿರುವ ಅಲ್ಲು ಅರ್ಜುನ್, ಚಿತ್ರದ ಮುಂದಿನ ಭಾಗ 'ಪುಷ್ಪ: ದ ರೂಲ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.