ಮಯೋಸಿಟಿಸ್ ಚಿಕಿತ್ಸೆಗಾಗಿ ತೆಲುಗಿನ ಸೂಪರ್ ಸ್ಟಾರ್ ಒಬ್ಬರ ಬಳಿ ₹25 ಕೋಟಿ ಪಡೆದಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ನಟಿ ಸಮಂತಾ ಪ್ರಭು, 'ನನ್ನನ್ನು ನಾನು ನೋಡಿಕೊಳ್ಳುವಷ್ಟು ಸಶಕ್ತಳಾಗಿದ್ದೇನೆ' ಎಂದು ತಿರುಗೇಟು ನೀಡಿದ್ದಾರೆ.

ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಸಮಂತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದರು. ಚಿಕಿತ್ಸೆ ಪಡೆಯುವ ಬಗ್ಗೆಯೂ ತಿಳಿಸಿದ್ದರು. ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಕೆಲವೊಂದು ಸಿನಿಮಾ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಕೂಡ ಹೇಳಿಕೊಂಡಿದ್ದರು.

ನಟಿಯ ರೋಗದ ಬಗ್ಗೆ ವರದಿ ಮಾಡಿದ ಕೆಲವು ಸುದ್ದಿ ಮಾಧ್ಯಮಗಳು, ಮಯೋಸಿಟಿಸ್ ಚಿಕಿತ್ಸೆಗಾಗಿ ಸಮಂತಾ ಖ್ಯಾತ ನಟರೊಬ್ಬರ ಬಳಿ ₹25 ಕೋಟಿ ಹಣ ಪಡೆದಿದ್ದಾರೆ ಎಂದು ಹೇಳಿದ್ದವು. ಈ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಸಮಂತಾ ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಸಮಂತಾ ತಾವು ಚಿಕಿತ್ಸೆಗಾಗಿ ಯಾರ ಬಳಿಯೂ ಹಣ ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಮಯೋಸಿಟಿಸ್ ಚಿಕಿತ್ಸೆಗೆ 25 ಕೋಟಿ? ಯಾರೋ ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಅದರ ಅಲ್ಪ ಭಾಗವನ್ನು ಮಾತ್ರ ಚಿಕಿತ್ಸೆಗೆ ವ್ಯಯಿಸಿದ್ದೇನೆ‘ ಎಂದು ಹೇಳಿದ್ದಾರೆ.

'ನಾನು ಸಿನಿಮಾಗಳಲ್ಲಿ ಬಿಟ್ಟಿಯಾಗಿ ನಟಿಸುತ್ತಿಲ್ಲ. ಅಲ್ಲಿ ನನಗೆ ಹಣ ನೀಡುತ್ತಾರೆ. ಆದ್ದರಿಂದ ನನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುವಷ್ಟು ಸಶಕ್ತಳಾಗಿದ್ದೇನೆ' ಎಂದು ತಿರುಗೇಟು ನೀಡಿದ್ದಾರೆ.

'ಮಯೋಸಿಟಿಸ್ನಿಂದ ಸಾವಿರಾರು ಜನರು ಬಳಲುತ್ತಿದ್ದಾರೆ. ಚಿಕಿತ್ಸಾ ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮುನ್ನ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸೋಣ' ಎಂದು ಮಾಧ್ಯಮಗಳಿಗೆ ಕಿವಿಮಾತು ಹೇಳಿದ್ದಾರೆ.

ಸದ್ಯ ಸಮಂತಾ ತಮ್ಮ ಮುಂದಿನ ಚಿತ್ರ 'ಖುಷಿ' ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.