ಮುಂಬೈ: ತೆಲುಗಿನ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ನಟನೆಯ ಜೊತೆ ಜೊತೆಗೆ ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ‘ತ್ರಾಲಾಲ ಮೂವಿಂಗ್ ಪಿಕ್ಚರ್ಸ್’ ಎಂಬ ಬ್ಯಾನರ್ ಅನ್ನು ಆರಂಭಿಸಿದ್ದಾರೆ.

ಈಗ, ಅತ್ತಾರಿಂಟಿಕಿ ದಾರೇದಿ, ದೂಕುಡು, ಮಹಾನಟಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಸಮಂತಾ, ಚಿತ್ರ ನಿರ್ಮಾಣ ಸಂಸ್ಥೆಯ ಮಾಹಿತಿಯನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಚಿತ್ರ ನಿರ್ಮಾಣ ಸಂಸ್ಥೆ ‘ತ್ರಾಲಾಲ ಮೂವಿಂಗ್ ಪಿಕ್ಚರ್ಸ್’ಅನ್ನು ಆರಂಭಿಸುತ್ತಿರುವುದಕ್ಕೆ ಅತ್ಯಂತ ಉತ್ಸುಕಳಾಗಿದ್ದೇನೆ: ಎಂದು ಬರೆದುಕೊಂಡಿದ್ದಾರೆ.

'ನವ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ಕಂಟೆಂಟ್ಗಳನ್ನು ಪ್ರತಿನಿಧಿಸುವುದು’ ನಮ್ಮ ನಿರ್ಮಾಣ ಸಂಸ್ಥೆಯ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ.

‘ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆಯ ಬಗ್ಗೆ ಮಾತನಾಡುವ ಕಥೆಗಳನ್ನು ಆಹ್ವಾನಿಸುವ ಮತ್ತು ಪ್ರೋತ್ಸಾಹಿಸುವ ಪೋಷಿಸುವ ಸ್ಥಳ, ಮತ್ತು ಅರ್ಥಪೂರ್ಣ, ನೈಜ ಮತ್ತು ಜಾಗತಿಕ ಕಥೆಗಳನ್ನು ಹೇಳಲು ಚಿತ್ರ ತಯಾರಕರಿಗೆ ವೇದಿಕೆ’ ಎಂದು ಹೇಳಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಗಾಗಿ ಸಮಂತಾ, ಹೈದರಾಬಾದ್ ಮೂಲದ ಎಂಟರ್ಟೈನ್ಮೆಂಟ್ ಕಂಪನಿ ಮಂಡೋವಾ ಮೀಡಿಯಾ ವರ್ಕ್ಸ್ನೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.