ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’, ರಾಘವೇಂದ್ರ ರಾಜ್ಕುಮಾರ್ ನಟನೆಯ ‘13’ ಸೇರಿದಂತೆ ಇಂದು(ಸೆ.15) ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.

‘ತತ್ಸಮ ತದ್ಭವ’: ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ ‘ತತ್ಸಮ ತದ್ಭವ’ ತೆರೆಕಂಡಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾವನ್ನು ವಿಶಾಲ್ ಆತ್ರೇಯ ನಿರ್ದೇಶಿಸಿದ್ದಾರೆ. ಪನ್ನಗ ಭರಣ, ಸ್ಫೂರ್ತಿ ಅನಿಲ್ ಹಾಗೂ ಚೇತನ್ ನಂಜುಂಡಯ್ಯ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಭಿನ್ನವಾದ ಒಂದು ಪಾತ್ರದಲ್ಲಿ ಮೇಘನಾ ನಟಿಸಿದ್ದು, ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ನಟಿಸಿದ್ದಾರೆ. ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಚಿತ್ರ ಬಿಡುಗಡೆಯಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಶ್ರೀನಿವಾಸ ರಾಮಯ್ಯ ಛಾಯಾಚಿತ್ರಗ್ರಹಣವಿದೆ.

‘ಟೇಲ್ಸ್ ಆಫ್ ಮಹಾನಗರ’: ಅಥರ್ವ್ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಕಿರಣ್ ನಿರ್ದೇಶಿಸಿದ್ದಾರೆ. ‘ಗೆಜ್ಜೆನಾದ’ ವಿಜಯ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರುತೆರೆಯಲ್ಲಿ ನಟಿಸಿರುವ ಅಥರ್ವ್ ಅವರಿಗೆ ಇದು ಚೊಚ್ಚಲ ಸಿನಿಮಾ. ಈ ಚಿತ್ರದ ಮೊದಲಾರ್ಧ ಮೂರು ಬೇರೆ ಕಥೆಗಳಿದ್ದು, ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಂದೇ ಆಗುತ್ತದೆ ಎಂದಿದೆ ಚಿತ್ರತಂಡ. ರೆಮೋಲ ಈ ಚಿತ್ರದ ನಾಯಕಿ.

‘13’: ‘ಪಲ್ಲಕ್ಕಿ’ ಖ್ಯಾತಿಯ ಕೆ.ನರೇಂದ್ರಬಾಬು ಅವರ ನಿರ್ದೇಶನದ, ರಾಘವೇಂದ್ರ ರಾಜ್ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ ತೆರೆಕಂಡಿದೆ. ರಾಘವೇಂದ್ರ ರಾಜ್ಕುಮಾರ್ ಅವರು ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ‘ಮೋಹನ್ ಕುಮಾರ್’ ಪಾತ್ರದಲ್ಲಿ ಮತ್ತು ಟೀ ಅಂಗಡಿ ನಡೆಸುವ ‘ಸಾಯಿರಾ ಬಾನು’ ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ. ಪ್ರಮೋದ್ ಶೆಟ್ಟಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ.

‘ಪರಿಮಳ ಡಿಸೋಜ’: ಗಿರಿಧರ್ ಎಚ್. ಟಿ. ಅವರ ನಿರ್ದೇಶನದ ಈ ಚಿತ್ರದಲ್ಲಿ ಬಹುತಾರಾಗಣವಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರದ ಈ ಸಿನಿಮಾದಲ್ಲಿ ಕೋಮಲ ಬನವಾಸೆ, ಭವ್ಯ, ಶ್ರೀನಿವಾಸ್ ಪ್ರಭು, ವಿನೋದ್ ಶೇಷಾದ್ರಿ, ಶ್ವೇತ ರಮೇಶ್, ಪೂಜಾ ರಾಮಚಂದ್ರ, ನಾಗಮಂಗಲ ಜಯರಾಮ್, ಮೀಸೆ ಆಂಜನಪ್ಪ, ಜ್ಯೋತಿ ಮರೂರ್, ಉಗ್ರಂ ರೆಡ್ಡಿ, ಚಂದನ ಶ್ರೀನಿವಾಸ್, ಲಕ್ಷ್ಮಣ್ ಗೌಡ, ರೋಹಿಣಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.