ಕಳೆದ ವರ್ಷ ತೆರೆಯ ಮೇಲೆ ಹೆಸರಾಂತ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾ ತೆರೆಕಂಡಿತ್ತು. ಇದೀಗ ಅವರ ಮತ್ತೊಂದು ಕೃತಿ ಸಿನಿಮಾವಾಗಲಿದೆ.

ತೇಜಸ್ವಿ ಅವರ ‘ಜುಗಾರಿ ಕ್ರಾಸ್’ ಮಲೆನಾಡಿನ ಕೃಷಿಕ ದಂಪತಿಯ ಸ್ವಾರಸ್ಯಕರ ಕಥೆಯನ್ನು ಹೇಳುತ್ತದೆ. ಓದುಗರ ನೆಚ್ಚಿನ ಕೃತಿಗಳಲ್ಲಿ ಒಂದಾದ ಇದನ್ನು ಸಿನಿಮಾವಾಗಿ ತೆರೆಮೇಲೆ ತರುವ ಸಾಹಸಕ್ಕೆ ಮುಂದಾಗಿರುವುದು ನಿರ್ದೇಶಕ ಗುರುದತ್ ಗಾಣಿಗ. ಸದ್ಯ ‘ಕರಾವಳಿ’ ಸಿನಿಮಾ ನಿರ್ದೇಶಿಸಿ ಅದರ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದಂದೇ ‘ಜುಗಾರಿ ಕ್ರಾಸ್’ ಸಿನಿಮಾ ನಿರ್ಮಾಣದ ಬಗ್ಗೆ ಚಿತ್ರತಂಡ ಘೋಷಿಸಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾವನ್ನು ಗುರುದತ್ ಗಾಣಿಗ ಫಿಲ್ಮ್ ಹಾಗೂ ಸಪ್ತಗಿರಿ ಎಂಟರ್ಟೇನ್ಮೆಂಟ್ ನಿರ್ಮಾಣ ಮಾಡುತ್ತಿದೆ.

‘ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಇದರಲ್ಲಿ ತೇಜಸ್ವಿ ಅವರು ರೋಚಕವಾಗಿ ಹೇಳಿದ್ದಾರೆ. ಜುಗಾರಿ ಕ್ರಾಸ್ ಕಾದಂಬರಿಯನ್ನು ಸಿನಿಮಾ ಮಾಡಬೇಕೆಂದು ಕನಸು ಕಂಡವರು ಅನೇಕರು. ಆದರೆ ಅವು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕೊನೆಗೂ ಕಾಲ ಕೂಡಿ ಬಂದಿದೆ. ‘ಜುಗಾರಿ ಕ್ರಾಸ್’ ಅನ್ನು ತೆರೆಮೇಲೆ ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಶೀಘ್ರದಲ್ಲೇ ಕಲಾವಿದರನ್ನು ಪರಿಚಯಿಸಲಾಗುವುದು’ ಎಂದಿದೆ ಚಿತ್ರತಂಡ.

ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಚಿತ್ರಗ್ರಹಣವಿರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.