ನಟ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶಿಸಿರುವ ‘ಕಾಟೇರ’ ಬಿಡುಗಡೆಗೂ ಮೊದಲೇ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದೆ. ಸಿನಿಮಾ ಇಂದು(ಡಿ.29) ತೆರೆಕಂಡಿದ್ದು, ‘ಆನ್ಲೈನ್ ಮೂಲಕವೇ ಒಂದು ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟವಾಗಿವೆ’ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಿಳಿಸಿದ್ದಾರೆ.

ಗುರುವಾರ ನಡುರಾತ್ರಿಯೇ ನಡೆದ ಫ್ಯಾನ್ ಶೋ ಭರ್ತಿಯಾಗಿದೆ. ಕೆಲ ಏಕಪರದೆ ಚಿತ್ರಮಂದಿರಗಳಲ್ಲಿ ದಿನಕ್ಕೆ 5–6 ಪ್ರದರ್ಶನಗಳು ನಿಗದಿಯಾಗಿವೆ. ರಾಜ್ಯದ 500ಕ್ಕೂ ಅಧಿಕ ಚಿತ್ರಮಂದಿರಗಳ ಸಾವಿರಕ್ಕೂ ಅಧಿಕ ಪರದೆಗಳಲ್ಲಿ ‘ಕಾಟೇರ’ ಪ್ರದರ್ಶನ ಕಾಣಲಿದೆ. ‘ಮಿಡ್ನೈಟ್ ಶೋದ ಟಿಕೆಟ್ಗಳು ಕ್ಷಣಮಾತ್ರದಲ್ಲೇ ಮಾರಾಟವಾಗಿವೆ. ನಿರ್ಮಾಪಕನಾಗಿ ಹಿಂದೆಂದೂ ಇಂತಹ ಕ್ರೇಜ್ ಕಂಡಿರಲಿಲ್ಲ. ನನ್ನದೇ ಮಾಲ್ನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದಕ್ಕೆ ಪ್ರತಿ ಟಿಕೆಟ್ಗೆ ₹1 ಸಾವಿರ ನಿಗದಿಪಡಿಸಿ ಮಿಡ್ನೈಟ್ ಶೋ ಇರಿಸಿದ್ದೇನೆ. ಇದರ ಬಹುತೇಕ ಎಲ್ಲ ಟಿಕೆಟ್ಗಳು ಮಾರಾಟವಾಗಿವೆ. ಟಿಕೆಟ್ ದರ ₹500 ಇಟ್ಟರೂ ಮಾರಾಟವಾಗಿದೆ. ಇದು ಕನ್ನಡ ಸಿನಿಮಾ ಮೇಲೆ ಜನರಿಗಿರುವ ಕ್ರೇಜ್ ತೋರಿಸಿದೆ’ ಎನ್ನುತ್ತಾರೆ ರಾಕ್ಲೈನ್ ವೆಂಕಟೇಶ್. ‘ಗುರು ಶಿಷ್ಯರು’ ಚಿತ್ರದ ನಂತರ ನಿರ್ದೇಶಕರಾದ ತರುಣ್ ಹಾಗೂ ಜಡೇಶ್ ಸೇರಿ ‘ಕಾಟೇರ’ ಕಥೆ ಹೆಣೆದಿದ್ದು, ದರ್ಶನ್ ಅವರಿಗಾಗಿಯೇ ಈ ಸಿನಿಮಾದ ಕಥೆ ಮಾಡಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ಈ ಚಿತ್ರದ ನಾಯಕಿ. ಇದು ತರುಣ್ ಅವರ ನಿರ್ದೇಶನದ ಮೂರನೇ ಚಿತ್ರವಾಗಿದ್ದು, 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.