ಬೆಂಗಳೂರು: ಸಿನಿಮಾ ರಂಗದ ಹಿರಿಯ ಖಳ ನಟ ಶನಿಮಹದೇವಪ್ಪ (88) ಕೊರೊನಾ ಕಾಯಿಲೆಯಿಂದಾಗಿ ಭಾನುವಾರ ಸಂಜೆ ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ‘ಬಂಗಾರದ ಮನುಷ್ಯ’, ‘ನಾನೊಬ್ಬ ಕಳ್ಳ’, ಶಂಕರ್‌ಗುರು, ‘ಹಾಲು ಜೇನು’, ‘ಕವಿರತ್ನ ಕಾಳಿದಾಸ’, ‘ರಣರಂಗ’ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಒಂದು ಕಾಲಕ್ಕೆ ಖ್ಯಾತ ಖಳನಟರಲ್ಲಿ ಒಬ್ಬರಾಗಿದ್ದ ಶನಿಮಹದೇವಪ್ಪ ಯಾನೆ ಶಿವಪ್ರಕಾಶ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಧೀರೇಂದ್ರ ಗೋಪಾಲ್, ಟೈಗರ್ ಪ್ರಭಾಕರ್, ಸುಧೀರ್ ಹಾಗೂ ಸುಂದರ್ ಕೃಷ್ಣ ಅವರ ಸಮಕಾಲೀನರು. ಡಾ.ರಾಜ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಶನಿಮಹಾದೇವಪ್ಪ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.