ಕನ್ನಡ ಚಿತ್ರರಂಗದ ಅಪ್ರತಿಮ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಅವರನ್ನು ಸ್ಮರಿಸೋಣ.
ತಮ್ಮ ಅದ್ವಿತೀಯ ಸೃಜನಶೀಲತೆ ಹಾಗೂ ಕಲ್ಪನಾಶಕ್ತಿ ಮೂಲಕ ಅತ್ಯಲ್ಪ ಕಾಲದಲ್ಲೇ ವಿಶಿಷ್ಟ ಛಾಪು ಮೂಡಿಸಿದ್ದ ಶಂಕರ್ ನಾಗ್ ಅವರು ಕನ್ನಡ ಕಲಾಪ್ರೇಮಿಗಳ ಹೃದಯದಲ್ಲಿ ಎಂದೂ ಮರೆಯಲಾಗದ ಅಪರೂಪದ ಮಾಣಿಕ್ಯವಾಗಿದ್ದರೆ. pic.twitter.com/3yYCrrfpRd
ಕನ್ನಡ ಚಿತ್ರರಂಗದ ದಂತಕಥೆಯಂತೆ ಬದುಕಿದ ಶ್ರೇಷ್ಠ ಕಲಾವಿದ, ನಟ, ನಿರ್ದೇಶಕ ಶ್ರೀ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ನಮನಗಳು. ವಿಭಿನ್ನವಾದ ಕಥೆ, ನಟನೆಗಳ ಮೂಲಕ ಶಂಕರ್ ನಾಗ್ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೆಲೆಯಾಗಿದ್ದಾರೆ.#Shankarnagpic.twitter.com/8S6qQwYSD0
ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸದಾ ಹೊಸತನ್ನು ತಂದು ಜನರ ಮನರಂಜಿಸಿದ ಅತ್ಯಂತ ಕ್ರಿಯಾಶೀಲ ನಿರ್ದೇಶಕ, ನಟ ಶ್ರೀ ಶಂಕರ್ ನಾಗ್ ಅವರ ಸ್ಮೃತಿದಿನದಂದು ಗೌರವದ ಪ್ರಣಾಮಗಳು. ಅಪೂರ್ವ ನಟನೆ, ವಿಭಿನ್ನ ಕಲಾಕೃತಿಗಳಿಂದ ಅವರು ಕನ್ನಡನಾಡಿನ ಕಲಾಲೋಕದ ಮರೆಯಲಾರದ ಅದ್ಭುತ ತಾರೆಯಾಗಿದ್ದಾರೆ.#shankarnagpic.twitter.com/AnSMUx6wg7
ಬಹುಮುಖ ಪ್ರತಿಭೆ ಶಂಕರ್ ನಾಗ್ ಅವರ ಪುಣ್ಯತಿಥಿಯಂದು ಗೌರವ ಪ್ರಣಾಮಗಳು. ನಿರ್ದೇಶನ ಮತ್ತು ನಟನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ದೂರದೃಷ್ಟಿಯುಳ್ಳ ಕಲಾವಿದ. ಇವರ ನಿರ್ದೇಶನದ ಮಾಲ್ಗುಡಿ ಡೇಸ್ ವಿಶ್ವವಿಖ್ಯಾತಿ ಪಡೆದ ದಂತಕಥೆಯಾಗಿದೆ. ಸಾಧನೆಯೇ ಬದುಕಿನ ಗುರಿ ಎಂಬ ಇವರ ತತ್ವ ನಮ್ಮೆಲ್ಲರಿಗೂ ಪ್ರೇರಣೆ. #ShankarNagpic.twitter.com/OuZcejv3iO
ಕನ್ನಡ ಚಿತ್ರರಂಗದ ಕ್ರಿಯಾಶೀಲ ನಟ, ಕಾಲ್ಪನಿಕ ಹಳ್ಳಿ ಮಾಲ್ಗುಡಿಗೆ ಮೂರ್ತ ರೂಪ ನೀಡಿ, ಕನ್ನಡಿಗರ ಸೃಜನಶೀಲತೆಯನ್ನು ದೇಶಕ್ಕೇ ಪರಿಚಯಿಸಿ, ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಶ್ರೀ ಶಂಕರ್ ನಾಗ್ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.#ShankarNagpic.twitter.com/lj0AZ7aa2H