ನವದೆಹಲಿ: ಸರ್ಕಾರಿ ನೇಮಕಾತಿಗಳ ಅಧಿಸೂಚನೆಯಲ್ಲಿ ನಿರ್ದಿಷ್ಟ ಸೂಚನೆಗಳನ್ನು ನೀಡದೆ, ಇಡೀ ಪ್ರಕ್ರಿಯೆಯನ್ನು ಮಧ್ಯದಲ್ಲಿ ತಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಅರ್ಜಿಯ ವಿಚಾರಣೆ ನಡೆಸಿತು.

‘ಒಂದು ಬಾರಿ ನೇಮಕಾತಿ ಪ್ರಕ್ರಿಯೆ ಆರಂಭವಾದರೆ, ಅದನ್ನು ಅರ್ಧದಲ್ಲಿಯೇ ನಿಲ್ಲಿಸುವಂತಿಲ್ಲ. ಇದು ‘ಆಟದ ನಿಯಮ’. ನೇಮಕಾತಿಯ ನಿಯಮಗಳು ಅನಿಯಂತ್ರಿತವಾಗಿರಬಾರದು ಹಾಗೂ ಸಂವಿಧಾನದ 14ನೇ ವಿಧಿಗೆ ಅನುಗುಣವಾಗಿರಬೇಕು ಎಂದು ಪೀಠ ಹೇಳಿದೆ.

ಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಪಿ.ಎಸ್. ನರಸಿಂಹ, ಪಂಕಜ್ ಮಿತ್ತಲ್ ಹಾಗೂ ಮನೋಜ್ ಮಿಶ್ರಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೇಮಕಾತಿಗಳು ಎಂದೆಂದಿಗೂ ತಾರತಮ್ಯ ರಹಿತ ಹಾಗೂ ಪಾರದರ್ಶಕವಾದ ಪಕ್ಷಗಳನ್ನು ಹೊಂದಿರಬೇಕು. ಆದರೆ ಮಧ್ಯದಲ್ಲಿ ಏನೇ ಬದಲಾವಣೆಗಳಾದರೂ ಅದರಿಂದ ಅಭ್ಯರ್ಥಿಗಳೂ ಅಚ್ಚರಿಗೊಳಗಬಾರದು ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.