ಬೆಂಗಳೂರು: ಅಕ್ಟೋಬರ್ 14 ರಂದು ನಟಿ ಸಂಗೀತಾ ಭಟ್ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರರಂಗದಲ್ಲಿ ತನಗಾದ ಕಹಿ ಅನುಭವಗಳನ್ನು ಮೀಟೂ ಹ್ಯಾಶ್ಟ್ಯಾಗ್ನೊಂದಿಗೆ ಹಂಚಿಕೊಂಡಿದ್ದರು. ಶ್ರುತಿ ಹರಿಹರನ್ ಅವರ ಮೀಟೂ ಅನುಭವಗಳು ಸುದ್ದಿಯಾಗುತ್ತಿದ್ದಂತೆ ಸಂಗೀತಾ ಭಟ್ ಫೇಸ್ಬುಕ್ ಪೋಸ್ಟ್ ನಲ್ಲಿರುವ ವಿಷಯಗಳು ಹೆಚ್ಚು ಚರ್ಚೆಗೀಡಾಗಿತ್ತು.

ಸಂಗೀತಾ ಭಟ್ ತಮ್ಮ ಪೋಸ್ಟ್ ನಲ್ಲಿ ಯಾವುದೇ ವ್ಯಕ್ತಿಗಳ ಹೆಸರನ್ನು ಉಲ್ಲೇಖ ಮಾಡದೇ ಇದ್ದರೂ, ಅವರು ಇವರೇನಾ? ಎಂಬ ಪ್ರಶ್ನೆಯೊಂದಿಗೆ ಹಲವಾರು ಸುದ್ದಿ, ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಮೀಟೂ: ಚಿತ್ರರಂಗಕ್ಕೆಸಂಗೀತಾ ಭಟ್ ವಿದಾಯ!

ಈ ಬಗ್ಗೆ ತಮ್ಮ ಫೇಸ್ಬುಕ್ ಪುಟದಲ್ಲಿ ವಿಡಿಯೊ ಪ್ರತಿಕ್ರಿಯೆ ನೀಡಿದ ಸಂಗೀತಾ, ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ.

ಸಂಗೀತಾ ಹೇಳಿರುವುದೇನು?

ಹಾಯ್, ಎಲ್ಲರಿಗೂ ನಮಸ್ಕಾರ,
ಸಂಗೀತಾ ಭಟ್ ಒಬ್ಬ ನಟನ ಮೇಲೆ ಆರೋಪ ಮಾಡಿದ್ದಾರೆ ಎಂದು ವಾಹಿನಿಯೊಂದರಲ್ಲಿ ಸುದ್ದಿ ನೋಡಿದೆ. 10 ವರ್ಷದ ಹಿಂದೆ ನಡೆದ ಅನುಭವವೊಂದನ್ನು ನಾನು ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದೆ.ನಾನು ಇಂಡಸ್ಟ್ರಿ ಬಿಟ್ಟು ಒಂದು ವರ್ಷ ಆಯ್ತು, ನಾನೀಗ ಇಂಡಸ್ಟ್ರಿಯಲ್ಲಿ ಇಲ್ಲ.ನಾನು ಯಾವುದೇ ಪಬ್ಲಿಸಿಟಿಗೆ ಇದನ್ನು ಮಾಡಿಲ್ಲ.#MeToo ಒಂದು ಪ್ಲಾಟ್ಫಾರಂ.ಹೆಣ್ಮಕ್ಕಳು ತಮ್ಮ ಕಷ್ಟಗಳನ್ನು, ಅವರ ಅನುಭವಗಳನ್ನು ಅಲ್ಲಿ ಶೇರ್ ಮಾಡ್ತಾರೆ.ನಾನು ನನ್ನ ಪೋಸ್ಟ್ ನಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ.ಯಾರೊಬ್ಬರನ್ನೂ ಅಪಖ್ಯಾತಿಗೊಳಿಸುವ ಕೆಲಸ ಮಾಡಿಲ್ಲ.

I have moved on.ನನ್ನ ಕೆಲವೊಂದು ಸಿನಿಮಾಗಳು, ಕಳೆದ ವರ್ಷ ಶೂಟ್ ಆಗಿದ್ದು, ಅದು ಬಿಡುಗಡೆಯಾಗಲಿದೆ. ನೋವಾಗ್ತಿರುವುದು ಏನಂದ್ರೆ ನಾನು ನಿಮ್ಮಂತೆಯೇ ಮನುಷ್ಯಳು, ನಾನು ಬದುಕಬೇಕೆಂದು ಆಸೆ ಪಡ್ತೀನಿ.
ನನ್ನ ಪೋಸ್ಟ್ ಗಳಿಗೆಲ್ಲಾ ಯಾಕೆ ಅಶ್ಲೀಲ ಕಾಮೆಂಟ್ ಹಾಕ್ತೀರಾ? harm ಆಗುವ ರೀತಿಯಲ್ಲಿ ನಾನೇನು ಮಾಡಿದೆ?I want to be myself, ನಿಮಗೆಲ್ಲರಿಗೂ ಕೈ ಮುಗಿದುಬೇಡಿಕೊಳ್ಳುತ್ತೇನೆ.

ನಾನು accusation, allegation ಮಾಡಿಲ್ಲ.ಎಷ್ಟೋ ಜನ ಇಂಡಸ್ಟ್ರಿಯವರು ನನ್ನ ಪೋಸ್ಟ್ ನನ್ನು weapon ಮಾಡುತ್ತಿದ್ದಾರೆ. ನಾನು ಇಂಡಸ್ಟ್ರಿಗೆ ಬಂದಿರುವುದು ನನ್ನ ಆ್ಯಕ್ಟಿಂಗ್ ಹುಚ್ಚಿಗೆ ಮಾತ್ರ. ನಾನು ನನ್ನ ಪೋಸ್ಟ್ ನಲ್ಲಿ ನನಗಾದ ಕೆಟ್ಟ ನೋವು, ಸಂಬಳ ಬಗ್ಗೆಯೂ ಬರೆದಿದ್ದೆ.ದಯವಿಟ್ಟು ಆ ಪೋಸ್ಟ್ ಪ್ರೊಮೋಟ್ ಮಾಡ್ಬೇಡಿ, I have moved on. ಪಬ್ಲಿಸಿಟಿಗಾಗಿ ನಾನು ಇದನ್ನು ಮಾಡಿಲ್ಲ.ನಾನು ಹ್ಯಾಪಿ ಆಗಿರ್ಬೇಕು. ರಿಕ್ವೆಸ್ಟ್ ಮಾಡ್ತಿದ್ದೀನಿ. ಅನಗತ್ಯವಾಗಿ ನನ್ನ ಪೋಸ್ಟ್ ಜತೆ ಬೇರೆ ಸ್ಟೋರಿಗಳನ್ನು ಬೆಸೆಯಬೇಡಿ. ಅವರವರ ಮನಸ್ಸಿನ ಊಹಾಪೋಹಗಳಿಗೆ ನನ್ನನ್ನು ಎಳೆದು ತರಬೇಡಿ. ಅನಗತ್ಯ ವಿಷಯಗಳಿಗ ನನ್ನನ್ನು ಎಳೆಯಬೇಡಿ. ನನ್ನ ನೋವಿಗೆ ಟೈಮ್ ಮೆಷೀನ್ನಲ್ಲಿ undo ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದಯವಿಟ್ಟು ಇಲ್ಲಿ ಬಿಟ್ಟು ಬಿಡಿ, ನನ್ನನ್ನು ನನ್ನ ಫ್ಯಾಮಿಲಿಯನ್ನು Drag ಮಾಡ್ಬೇಡಿ. ನನಗೆ ನೆಗೆಟಿವಿಟಿ ಅಗತ್ಯವಿಲ್ಲ. ಈಗಲೇ ಅದನ್ನು ನಿಲ್ಲಿಸಿ.ನನ್ನ ಪೋಸ್ಟ್ ನಲ್ಲಿ ಹೆಸರು ಹೇಳಿ ಎಂದು ಒತ್ತಾಯಿಸುತ್ತಿದ್ದೀರಲ್ಲಾ, ನನಗೆ ಹೆಸರು ಅನಗತ್ಯ.ನನ್ನಲ್ಲಿ ಹೆಸರು ಕೇಳ್ಬೇಡಿ, ನನಗೆ ಯಾರ ಹೆಲ್ಪ್ ಬೇಡ.

#MeToo ಪೋಸ್ಟ್ ನ್ನು ಹೈಲೈಟ್ ಮಾಡಬೇಡಿ. ಬೇರೆ ಆ್ಯಕ್ಟರ್ಸ್ ಗೆ ನೋವಾಗಿ, ಅವರ ಫ್ಯಾಮಿಲಿಗೆ ನೋವಾಗುವಂತೆ ಮಾಡಬೇಡಿ.
ನನ್ನನ್ನು ದಯವಿಟ್ಟು ಇದರಿಂದ ಬಿಟ್ಟು ಬಿಡಿ, ನನಗೆ ನಡೆದಂತ situation ನ್ನು ಬೇರೆ ರೀತಿಯಲ್ಲಿ explainಮಾಡಲು ಆಗಲ್ಲ.ನಾನು ಯಾರಲ್ಲಿಯೂ ಹೆಲ್ಪ್ ಮಾಡಿ ಎಂದು ಹೇಳಿಲ್ಲ.

ನನಗೆ ಫೈಟ್ ಮಾಡಬೇಕು ಎಂಬ ಉದ್ದೇಶವಿಲ್ಲ.ಯಾವುದೇ protest ನಲ್ಲಿ ನಾನು ಇಲ್ಲ.ದಯವಿಟ್ಟು ಈ ವಿಷಯದಿಂದ ನನ್ನ ದೂರವಿಡಿ.

ನಾನು ಯಾರ ಮೇಲೂ ಆರೋಪ ಮಾಡಿಲ್ಲ, ನಿಮ್ಮ ಊಹೆಗಳನ್ನು ಮಿಕ್ಸ್ ಮಾಡಿ ಆ ಸ್ಟೋರಿಯಲ್ಲಿ ಬೇರೇನೋ ಕಲ್ಪಿಸಬೇಡಿ. ನನಗೆ ಯಾರ ಸಪೋರ್ಟ್ ಕೂಡಾ ಬೇಡ.ನಾನು ಜಸ್ಟ್ ನನ್ನ ಅನುಭವ ಶೇರ್ ಮಾಡಿದೆ.ನನ್ನನ್ನು ಇದಕ್ಕೆ drag ಮಾಡ್ಬೇಡಿ, ಕೈ ಜೋಡಿಸಿ ಕೇಳಿಕೊಳ್ತಿದ್ದೀನಿ.

ನನ್ನ ಪೋಸ್ಟ್ ಅನ್ನು ಅನಗತ್ಯವಾಗಿ ಪ್ರೊಮೋಟ್ ಮಾಡ್ಬೇಡಿ. media attention ಮತ್ತು publicityಗೆ ಬೇಕಾಗಿ ನಾನು ಮಾಡಿಲ್ಲ.
I want to live my life. ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ಮನುಷ್ಯತ್ವದಿಂದ ಅರ್ಥ ಮಾಡಿ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.