ಮುಂಬೈ: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಮಗ ರಣವೀರ್‌ನ 13ನೇ ಹುಟ್ಟುಹಬ್ಬದ ಅಂಗವಾಗಿ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಬರಹ ಮತ್ತು ವಿಡಿಯೊವನ್ನು ಪ್ರಕಟಿಸಿದ್ದಾರೆ.

ಮೆಟಸ್ಟ್ಯಾಟಿಸ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸೋನಾಲಿ, ಕಳೆದ ಹಲವು ದಿನಗಳಿಂದ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ರಣವೀರ್! ನನ್ನ ಸೂರ್ಯ, ಚಂದ್ರ, ನಕ್ಷತ್ರಗಳು, ಆಕಾಶ... ಸರಿ, ಬಹುಶಃ ನಾನು ಸ್ವಲ್ಪ ಭಾವಾತಿರೇಕಗೊಂಡಿದ್ದೇನೆ. ಆದರೆ ಇದು ನಿನ್ನ 13ನೇ ಹುಟ್ಟುಹಬ್ಬ. ವಾಹ್ !, ಇದೀಗ ನೀನು ಹದಿಹರೆಯದವ. ನಿನ್ನ ವಿವೇಕ, ಹಾಸ್ಯ, ಶಕ್ತಿ, ದಯೆ, ತುಂಟಾಟಗಳ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ನಿನ್ನಿಂದ ನಾನು ಎಷ್ಟು ಖುಷಿಯಾಗಿದ್ದೇನೆ ಎಂದು ಹೇಳಲು ನನಗೆ ಸಾಧ್ಯವಿಲ್ಲ. ಜನ್ಮದಿನದ ಶುಭಾಶಯಗಳು. ನಾವು ಒಟ್ಟಾಗಿ ಇಲ್ಲದಿರುವ ಮೊದಲ ಸಂದರ್ಭವಿದು. ನಾನು ನಿನ್ನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನುನಿನ್ನನ್ನುಸದಾಕಾಲ ಅತಿಯಾಗಿ ಪ್ರೀತಿಸುವೆ’ ಎಂದು ಬರೆದಿದ್ದಾರೆ.

ಈಚೆಗೆ, ‘ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ನನಗೆ ಧೈರ್ಯ’ ಎಂದು ಸೋನಾಲಿ ಹೇಳಿದ್ದರು.

ಇದನ್ನೂ ಓದಿ...

ಕ್ಯಾನ್ಸರ್ ವಿರುದ್ಧ ಹೋರಾಡಲು ಮಗನೇ ಧೈರ್ಯ: ಸೋನಾಲಿ

ಕ್ಯಾನ್ಸರ್: ಗುಣಮುಖರಾಗುವ ವಿಶ್ವಾಸದಲ್ಲಿ ಬಾಲಿವುಡ್ ನಟಿ ಸೋನಾಲಿ ಬೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.