ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಇಂದಿಗೆ ಮೂರು ವರ್ಷ ಕಳೆದಿದೆ. ನಟನ ಕುಟುಂಬ ಸದಸ್ಯರು, ಸ್ನೇಹಿತರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಹಲವರು ನಟನ ನೆನಪಿನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ. ರಿಯಾ ಚಕ್ರವರ್ತಿ ಹಳೆ ವಿಡಿಯೊಂದನ್ನು ಹಂಚಿಕೊಳ್ಳುವ ಮೂಲಕ ಗೆಳೆಯನನ್ನು ಸ್ಮರಿಸಿಕೊಂಡಿದ್ದಾರೆ.

ಸುಶಾಂತ್ ಸಿಂಗ್ 14 ಜೂನ್ 2020ರಂದು ಮುಂಬೈನ ತಮ್ಮ ಅಪಾರ್ಟ್ಮೆಂಟ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಾಣಿಸಿದರೂ ಹಲವರು ಇದೊಂದು ಕೊಲೆ ಎಂದು ಆರೋಪಿಸಿದ್ದರು. ಬಾಲಿವುಡ್ನ ಸ್ವಜನಪಕ್ಷಪಾತವೂ ಸುಶಾಂತ್ ಸಾವಿಗೆ ಪರೋಕ್ಷ ಕಾರಣವಾಗಿದೆ ಎಂದು ಹೇಳಲಾಗಿತ್ತು. ಸುಶಾಂತ್ ಸಾವಿನ ಬೆನ್ನಲ್ಲೆ ಪ್ರೇಯಸಿ ರಿಯಾ ಚಕ್ರವರ್ತಿ ಅವರನ್ನು ಡ್ರಗ್ಸ್ ಸೇವನೆ ಪ್ರಕರಣ ಸಂಬಂಧ ಬಂಧನ ಮಾಡಲಾಗಿತ್ತು. ಸುಶಾಂತ್ ಸಾವಿನ ವಿಚಾರವಾಗಿ ರಿಯಾ ಹಲವು ಆರೋಪಗಳಿಗೆ ಗುರಿಯಾಗಿದ್ದರು.

ಬಂಡೆ ಮೇಲೆ ಕುಳಿತು ಸಂತೋಷ ಕ್ಷಣವನ್ನು ಕಳೆದ ವಿಡಿಯೋ ಪೋಸ್ಟ್ ಮಾಡಿರುವ ರಿಯಾ, ಪಿಂಕ್ ಫ್ಲಾಯೆಡ್ಸ್ ಅವರ 'Wish You Were Here' ಹಾಡನ್ನು ಹಾಕಿಕೊಂಡಿದ್ದಾರೆ. ರಿಯಾ ವಿಡಿಯೊ ನೋಡಿ ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.

ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಪುಣ್ಯತಿಥಿಯಂದು ಸಹೋದರನ ನೆನಪು ಮಾಡಿಕೊಂಡಿದ್ದಾರೆ. 'ಲವ್ ಯು ಭಾಯ್, ನಿನ್ನ ಬುದ್ದಿವಂತಿಕೆಗೆ ಒಂದು ಸೆಲ್ಯೂಟ್. ನಿನ್ನನ್ನು ದಿನಾ ನೆನಪಿಸಿಕೊಳ್ಳುತ್ತೇನೆ. ಇದೀಗ ನೀನು ನನ್ನ ಜೀವನದ ಭಾಗವೇ ಆಗಿದ್ದೀಯಾ. ನನ್ನ ಉಸಿರಾಗಿದ್ದೀಯಾ' ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟಿ ಸಾರಾ ಅಲಿ ಖಾನ್, ಸುಶಾಂತ್ ಸಿಂಗ್ ಜೊತೆ ಶೂಟಿಂಗ್ ವೇಳೆ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಸಾರಾ ಅಲಿ ಖಾನ್ ಮತ್ತು ಸುಶಾಂತ್ ಸಿಂಗ್ 'ಕೇದರನಾಥ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ನಟಿ ಕೃತಿ ಸನೋನ್ ಕೂಡ ನಟನನ್ನು ಸ್ಮರಿಸಿದ್ದಾರೆ.

ಸ್ಮರಿಸಿದ ಕಂಗನಾ:

ಸುಶಾಂತ್ ಸಿಂಗ್ ಪುಣ್ಯತಿಥಿಯಾದ ಇಂದು ನಟಿ ಕಂಗನಾ ರನೌತ್ ಯಾವುದೇ ಪೋಸ್ಟ್ ಹಾಕದಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಸುಶಾಂತ್ ಸಿಂಗ್ ಸಾವಿನ ಸಮಯದಲ್ಲಿ ಕಂಗನಾ ರನೌತ್ ಹೆಚ್ಚು ಸುದ್ದಿಯಲ್ಲಿದ್ದರು. ಸುಶಾಂತ್ ಸಾವಿಗೆ ಸ್ವಜನಪಕ್ಷಪಾತವೇ ಕಾರಣ ಎಂದು ದೂರಿದ್ದರು. ರಿಯಾ ಚಕ್ರವರ್ತಿ ಬಂಧನವನ್ನು ಸಮರ್ಥಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.