ಮುಂಬೈ: ತಮ್ಮ ಮುಂದಿನ ರಶ್ಮಿ ರಾಕೆಟ್ ಚಿತ್ರದಲ್ಲಿ ಅಥ್ಲೀಟ್ ಪಾತ್ರದಲ್ಲಿ ನಟಿಸುತ್ತಿರುವ ನಟಿ ತಾಪ್ಸಿ ಪನ್ನು ಪಾತ್ರಕ್ಕಾಗಿ ದೇಹ ಮಾರ್ಪಾಡು ಮಾಡಲು ನಡೆಸಿದ ದೈಹಿಕ ಕಸರತ್ತು ಅತ್ಯಂತ ನೋವಿನಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದಾರೆ.

ರಾಕೆಟ್ ರಶ್ಮಿ ಚಿತ್ರಕ್ಕಾಗಿ ಅಥ್ಲೀಟ್ ರೀತಿ ದೇಹವನ್ನು ಹುರಿಗೊಳಿಸುವ ಯತ್ನದಲ್ಲಿ ಏನೆಲ್ಲ ಆಯಿತು ಎಂಬ ವಿಡಿಯೋವನ್ನು ಇನ್ಸ್ಟಾಗ್ರಾಮಲ್ಲಿ ಶೇರ್ ಮಾಡಿದ್ದಾರೆ.

"ಅದು ನೋವಿನಿಂದ ಕೂಡಿತ್ತು. ಮೂರನೇ ದಿನದ ಚಿತ್ರೀಕರಣದ ಸಂದರ್ಭ ನನ್ನ ದೇಹ ಸಂಪೂರ್ಣ ಸುಸ್ತಾಗಿತ್ತು. ನನ್ನಿಂದ ಓಡಲು ಆಗುತ್ತಿರಲಿಲ್ಲ. ಹಾಗಾಗಿ, ಚಿತ್ರೀಕರಣ ನಿಲ್ಲಿಸಬೇಕಾಯಿತು. ಈ ಚಿತ್ರಕ್ಕಾಗಿ ಜಿಮ್ನಲ್ಲಿ ಭಾರೀ ಕಸರತ್ತು ನಡೆಸಬೇಕಾಯಿತು" ಎಂದು44 ಸೆಕೆಂಡಿನ ವಿಡಿಯೋದಲ್ಲಿ ತಾಪ್ಸಿ ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ನಟಿಯ ಜಿಮ್ ವರ್ಕೌಟ್, ಅಭ್ಯಾಸ ಮತ್ತು ಕ್ರೀಡಾಪಟು ಲುಕ್ ಬರಲು ಮಾಡಿದ ಪ್ರಯತ್ನದ ದೃಶ್ಯಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.