ಸರಿಯಾಗಿ ಕಣ್ಣು ಕಾಣಿಸುವ ಹುಡುಗರಿಗೇ ಇಂದು ಹುಡುಗಿ ಸಿಗುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ದೃಷ್ಟಿಶಕ್ತಿ ಕಳೆದುಕೊಂಡ ಒಬ್ಬನಿಗೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ನಿರ್ದೇಶಕ ಕೆ.ಶಂಕರ್!

‘ಆ್ಯಕ್ಟ್ 370’ ಎಂಬ ಚಿತ್ರ ನಿರ್ದೇಶಿಸಿದ್ದ ಶಂಕರ್ ಅವರೀಗ ಹಾಸ್ಯಪ್ರಧಾನ ಚಿತ್ರಕ್ಕೆ ಕೈಹಾಕಿದ್ದಾರೆ. ಲೈರಾ ಎಂಟರ್ಟೇನ್ಮೆಂಟ್ ಆ್ಯಂಡ್ ಮೀಡಿಯಾ ಮೂಲಕ ಭರತ್ ಗೌಡ ಮತ್ತು ಸಿ.ರಮೇಶ್ ಜೊತೆಯಾಗಿ ನಿರ್ಮಿಸುತ್ತಿರುವ, ಶಂಕರ್ ನಿರ್ದೇಶನವಿರುವ ಈ ಚಿತ್ರದ ಹೆಸರು ‘ನನಗೂ ಹೆಂಡ್ತಿ ಬೇಕು’. ಅಂಧನೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಗಳನ್ನು ಹಾಸ್ಯಮಯವಾಗಿ ಹೇಳುವ ಕಥಾಹಂದರ ಹೊತ್ತ ಸಿನಿಮಾ ಇದಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಶಂಕರ್ ಅವರೇ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮದುವೆಯಾಗಲು ಹೊರಟು ಹೆಣ್ಣು ಸಿಗದೇ ಪರಿತಪಿಸುವ ಅಂಧನ ಪಾತ್ರದಲ್ಲಿ ನಟ ತಬಲ ನಾಣಿ ಅವರು ಕಾಣಿಸಿಕೊಂಡಿದ್ದಾರೆ. ನಾಣಿಗೆ ಜೊತೆಯಾಗಿ ಬ್ಯಾಂಕ್ ಜನಾರ್ದನ್ ಮತ್ತು ಬಾಲು ನಟಿಸಿದ್ದಾರೆ. ಬಿಗ್ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಮೂಕಿಯಾಗಿ ನಟಿಸಿದ್ದಾರೆ ಎಂದಿದೆ ಚಿತ್ರತಂಡ. ಕೆ.ಎಂ.ಇಂದ್ರ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.