ಚೆನ್ನೈ: ನನ್ನ ಹೆಸರಿನ ಮುಂದೆ 'ತಲ' ಅಥವಾ ಬೇರೆ ಯಾವುದೇ ಹೆಸರನ್ನು ಸೇರಿಸದೆ ಅಜಿತ್, ಅಜಿತ್ ಕುಮಾರ್ ಅಥವಾ ಕೇವಲ ಎಕೆ ಎಂದು ಕರೆಯಿರಿ ಎಂದು ತಮಿಳು ನಟ ಅಜಿತ್ ಕುಮಾರ್ ಅಭಿಮಾನಿಗಳಿಗೆ ವಿನಂತಿಸಿಕೊಂಡಿದ್ದಾರೆ.

ತಮಿಳು ನಟರ ಹೆಸರಿನ ಮುಂದೆ ಬಿರುದಾಂಕಿತಗಳು ಸಾಮಾನ್ಯ. ರಜನಿಕಾಂತ್ಗೆ ಸೂಪರ್ಸ್ಟಾರ್, ಚಿರಂಜೀವಿಗೆ ಮೆಗಾಸ್ಟಾರ್, ವಿಜಯ್ಗೆ ತಲಪತಿ ಹೀಗೆ ಪ್ರತಿಯೊಬ್ಬ ನಟನ ಮುಂದೆಯೂ ಅಭಿಮಾನಿಗಳು ವಿಶೇಷ ನಾಮದಿಂದ ಗುರುತಿಸುವುದು ರೂಢಿ. ಅಂತೆಯೇ ನಟ ಅಜಿತ್ ಅವರನ್ನು ಅವರ ಅಭಿಮಾನಿಗಳು ನಾಯಕ ಎಂಬರ್ಥ ಕೊಡುವ 'ತಲ' ಹೆಸರಿನಿಂದ ಗುರುತಿಸುತ್ತಿದ್ದರು.

2001ರ 'ಧೀನ' ಸಿನಿಮಾದಲ್ಲಿ ಅಜಿತ್ ತಲ ಧೀನದಯಾಳನ್ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದರು. ಬಳಿಕ ಅಭಿಮಾನಿಗಳು ಅಜಿತ್ ಅವರನ್ನು ತಲ ಅಜಿತ್ ಎಂದೇ ಗುರುತಿಸಲು ಆರಂಭಿಸಿದ್ದರು.

ನಟ ಅಜಿತ್ ಪರವಾಗಿ ಅವರ ಮ್ಯಾನೇಜರ್ ಸುರೇಶ್ ಚಂದ್ರ ಅವರು ಟ್ವೀಟ್ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಪೋಸ್ಟ್ನಲ್ಲಿ 'ಗೌರವಾನ್ವಿತ ಮಾಧ್ಯಮ ಸದಸ್ಯರಿಗೆ, ಸಾರ್ವಜನಿಕರಿಗೆ ಮತ್ತು ಅಭಿಮಾನಿಗಳಿಗೆ ಮನವಿ. ನನ್ನನ್ನು ಅಜಿತ್, ಅಜಿತ್ ಕುಮಾರ್ ಅಥವಾ ಕೇವಲ ಎಕೆ ಎಂದಷ್ಟೇ ಗುರುತಿಸಿ. ತಲ ಅಥವಾ ಬೇರೆ ರೀತಿಯ ಬಿರುದಾಂಕಿತಗಳನ್ನು ನನ್ನ ಹೆಸರಿನ ಮುಂದೆ ಸೇರಿಸಬೇಡಿ' ಎಂದು ನಟ ಅಜಿತ್ ಕುಮಾರ್ ವಿನಂತಿಸಿಕೊಂಡಿದ್ದಾರೆ.

‘ವಿಕ್ರಂ ವೇದಾ’: ಚಿತ್ರೀಕರಣ ಆರಂಭಿಸಿದ ಚಿತ್ರತಂಡ, ಸೈಫ್ ಆಲಿಖಾನ್ ಭಾಗಿ

50ರ ಹರೆಯದ ನಟ ಅಜಿತ್ 2019ರಲ್ಲಿ ನೇರಕೊಂಡ ಪಾರವೈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 2022ರ ಪೊಂಗಲ್ (ಸಂಕ್ರಾಂತಿ) ಹಬ್ಬಕ್ಕೆ ಅಜಿತ್ ನಟನೆಯ ವಲಿಮೈ ಬಿಡುಗಡೆಯಾಗಲಿದೆ.

ಅಸುರನ್, ಕರ್ಣನ್ ಇತ್ಯಾದಿ ಪ್ರಸಿದ್ಧ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಧನುಷ್ ಅವರು ಇದುವರೆಗೆ ಯಾವುದೇ ಬಿರುದಾಂಕಿತಗಳಿಂದ ಗುರುತಿಸಿಕೊಳ್ಳದೆ ಇರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.