ಬೆಂಗಳೂರು: ‘ಹಾರ್ನ್ ಓಕೆ ಪ್ಲೀಸ್’ ಚಿತ್ರೀಕರಣದ ವೇಳೆ ಹಿರಿಯ ನಟ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದರೆಂದು ಹೇಳಿ #Metooಅಭಿಯಾನಕ್ಕೆ ಚಾಲನೆ ನೀಡಿದ್ದ ನಟಿ ತನುಶ್ರಿ ದತ್ತಾ, ನಿರ್ದೇಶಕ ವಿವೇಕ್ ಅಗ್ನಹೋತ್ರಿಯ ಬಗ್ಗೆಯೂ ಹೊಸ ಬಾಂಬ್ ಸಿಡಿಸಿದ್ದಾರೆ.

ಚಿತ್ರರಂಗದ ಕಹಿ ಅನುಭವಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿರುವ ತನುಶ್ರೀ, ತಮ್ಮ ಮೊದಲ ಸಿನಿಮಾ ಅನಿಲ್ ಕಪೂರ್, ಸುನೀಲ್ ಶೆಟ್ಟಿ, ಇರ್ಫಾನ್ ಖಾನ್ ತಾರಾಗಣದ ‘ಚಾಕೊಲೇಟ್: ಡೀಪ್ ಡಾರ್ಕ್ ಸೀಕ್ರೆಟ್’ ಸಿನಿಮಾ ಚಿತ್ರೀಕರಣದ ವೇಳೆ ವಿವೇಕ್ ಅಗ್ನಿಹೋತ್ರಿ ‘ಬಟ್ಟೆ ಬಿಚ್ಚಿ ನೃತ್ಯ ಮಾಡು’ ಎಂದಿದ್ದರಂತೆ.

‘ಅದೊಂದು ಕ್ಲೋಸ್ ಅಪ್ ದೃಶ್ಯ. ನನ್ನನ್ನು ನೋಡಿಕೊಂಡು ಅವರು ಮುಖದ ಭಾವನೆಗಳನ್ನು ವ್ಯಕ್ತಪಡಿಸಬೇಕಿತ್ತು. ಆದರೆ, ಆ ದೃಶ್ಯದಲ್ಲಿ ನಾನಿರುವುದಿಲ್ಲ. ನಟ ಇರ್ಫಾನ್ ಖಾನ್ ಆ ದೃಶ್ಯವನ್ನು ಮಾಡುತ್ತಿದ್ದರು. ಏನನ್ನಾದರೂ ನೋಡಿಕೊಂಡು ಅವರು ಭಾವನೆಗಳನ್ನು ಅಭಿವ್ಯಕ್ತಿಸಬೇಕಾಗುತ್ತದೆ. ಆ ವೇಳೆ ವಿವೇಕ್, ಅವರ ಬಳಿ ಹೋಗಿ ಬಟ್ಟೆ ಬಿಚ್ಚಿ ಕುಣಿದು ಅವರಿಗೆ ಕ್ಯೂ (ಅಭಿನಯಕ್ಕೆ ಹಿಂದ ದೃಶ್ಯದ ಸುಳಿವು) ಕೊಡು ಎಂದರು. ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಡುಗಿ ಹೋದೆ’ ಎಂದು ಹೇಳಿದರು.

ಇದನ್ನು ಕೇಳಿ ಹೌಹಾರಿದ ಇರ್ಫಾನ್ ಖಾನ್, ‘ಏನು ಹೇಳುತಿದ್ದೀರಿ? ಕ್ಲೋಸ್ ಅಪ್ ಹೇಗೆ ನೀಡಬೇಕೆಂದು ನನಗೆ ಗೊತ್ತು. ಅದಕ್ಕೆ ಅವರು ಬಟ್ಟೆ ಬಿಚ್ಚಿ ಕುಣಿಯಬೇಕಿಲ್ಲ’ ಎಂದು ನಿರ್ದೇಶಕರ ಬಾಯಿ ಮುಚ್ಚಿಸಿದರು. ಅದಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರಿಂದ ಇರ್ಫಾನ್ ಖಾನ್ ಅವರಿಗೆ ಹಾಗೆ ಹೇಳಲು ಸಾಧ್ಯವಾಯಿತು. ಸುನೀಲ್ ಶೆಟ್ಟಿ ಅವರು ನಿರ್ದೇಶಕರ ಈ ನಡೆಯನ್ನು ವಿರೋಧ ವ್ಯಕ್ತಪಡಿಸಿದ್ದರು. ಹೌದು ಚಿತ್ರರಂಗದಲ್ಲಿ ಒಳ್ಳೆಯವರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.