ಹೈದರಾಬಾದ್: ತೆಲುಗು ನಟ ರವಿತೇಜ ಅವರ ಹೊಸ ಚಿತ್ರದ ಹೆಸರಿನ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ರವಿತೇಜ ಅವರು ಹರೀಶ್ ಶಂಕರ್ ನಿರ್ದೇಶನದ Mr ಬಚ್ಚನ್ ( ಮಿಸ್ಟರ್ ಬಚ್ಚನ್) ಚಿತ್ರದ ಮೂಲಕ ಅಭಿಮಾನಿಗಳ ಎದುರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ರವಿತೇಜ ಅವರು 'ನೆಚ್ಚಿನ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ಮೂಡಿಬರುತ್ತಿರುವ ‘Mr ಬಚ್ಚನ್‘ ಚಿತ್ರದಲ್ಲಿ ಬಣ್ಣ ಹಚ್ಚುವುದು ನನಗೆ ಹೆಮ್ಮೆಯ ವಿಷಯ' ಎಂದು ಸಂತಸ ಹಂಚಿಕೊಂಡಿದ್ದಾರೆ.

ಚಿತ್ರತಂಡ ಬಿಡುಗಡೆಗೊಳಿಸಿರುವ ಪೋಸ್ಟರ್ನಲ್ಲಿ ರವಿತೇಜ 1970ರ ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದ ರೀತಿಯಲ್ಲಿಯೇ ಕಾಣಿಸಿಕೊಂಡಿದ್ದಾರೆ.

ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಟಿಜಿ ವಿಶ್ವ ಪ್ರಸಾದ್ ನಿರ್ಮಾಣ ಮಾಡಲಿದ್ದಾರೆ.

‘ಶಾಕ್‘ ಮತ್ತು ‘ಮಿರಪಕಾಯ್‘ ಬಳಿಕ ಮೂರನೇ ಬಾರಿಗೆ ನಟ ರವಿತೇಜ ಹಾಗೂ ನಿರ್ದೇಶಕ ಹರೀಶ್ ಶಂಕರ್ ಜತೆಯಾಗಿ ಕೆಲಸ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.